
ಹೆಬ್ರಿ : ‘ ಕಾರ್ಕಳ ಟೈಗರ್ಸ್ ‘ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ, ಎಸ್ ಆರ್ ಎಜುಕಷನ್ ಟ್ರಸ್ಟ್ (ರಿ ) ಹೆಬ್ರಿ ಮತ್ತು ಜಿ. ಎಸ್. ಬಿ ಯುವಜನ ಸಭಾ ಹೆಬ್ರಿ ಇವರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ “ಅಷ್ಟಮಿದ ಕೆಸರ್ದ ಓಕುಳಿ ” ಎಂಬ ವಿಭಿನ್ನ ಕಾರ್ಯಕ್ರಮವನ್ನು ಆಗಸ್ಟ್ 24 ರಂದು ಹೆಬ್ರಿಯ ಅರ್ಧ ನಾರೀಶ್ವರ ದೇವಸ್ಥಾನದ ಬಾಕಿ ಮಾರು ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ .

ಆದಿತ್ಯವಾರ ಬೆಳಿಗ್ಗೆ 9.30 ರಿಂದ ಆರಂಭಗೊಳ್ಳಲಿರುವ ಈ ಕಾರ್ಯಕ್ರಮದಲ್ಲಿ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ, ಪುರುಷರ ವಾಲಿಬಾಲ್ ಹಾಗೂ ಮಹಿಳೆಯರ ತ್ರೋ ಬಾಲ್ , ಅಟ್ಟಳಿಕೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ ಹಾಗೂ ಇತರ ಆಟೋಟ ಸ್ಪರ್ಧೆಗಳು ನಡೆಯಲಿದೆ.ಇದರೊಂದಿಗೆ ರೀಲ್ಸ್ ಕಾಂಟೆಸ್ಟ್ ಕೂಡಾ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಕೂಡಾ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.