
ಉಡುಪಿ : ಹಿರಿಯಡಕದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ಕಲಾ ಶಿಕ್ಷಕ ಶ್ರೀಯುತ ಮೋಹನ್ ಕಡಬ ಅವರಿಗೆ ಉಡುಪಿ ರಾಜಾಂಗಣದಲ್ಲಿ ರಾಗವಾಹಿನಿ (ರಿ) ಉಡುಪಿ, ಕಲಾನಿಧಿ (ರಿ).. ಸಾಂಸ್ಕೃತಿಕ ಕಲಾಪ್ರಕಾರಗಳ ಸಂಸ್ಥೆ, ಉಡುಪಿ ಮತ್ತು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ2025 ಆಗಸ್ಟ್ 2, ರಂದು “ಚಿತ್ರಕಲಾ ಚೇತನ” ಎಂಬ ಬಿರುದಿನೊಂದಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶ್ರೀಯುತ ಮೋಹನ್ ಕಡಬರವರು ಹಿರಿಯಡಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸರಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಮಕ್ಕಳು ಹಾಗೂ ಅಲ್ಲಿನ ಸಹೋದ್ಯೋಗಿಗಳಿಗೆ ಅಚ್ಚು ಮೆಚ್ಚಿನ ಕಡಬ ಸರ್ ಎಂದೇ ಹೆಸರು ವಾಸಿಯಾಗಿದ್ದಾರೆ. ಶಾಲೆಯಲ್ಲಿನ ಕೈದೋಟ , ಕಾರ್ಯಕ್ರಮಗಳಲ್ಲಿ ಸಭಾಂಗಣದ ವಿಶೇಷ ಅಲಂಕಾರ , ಮಕ್ಕಳಿಗಾಗಿ ವಿಶೇಷ ಕಲಾ ಶಿಬಿರಗಳನ್ನು ಆಯೋಜಿಸಿ ಅತ್ಯುತ್ತಮ ಕಲಾ ಶಿಕ್ಷಕರಾಗಿ ಹಿರಿಯಡಕ ಪರಿಸರದಲ್ಲಿ ಉತ್ತಮ ಹೆಸರನ್ನು ಪಡೆದಿರುತ್ತಾರೆ.