
ಬೀದರ್ : ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ (H.K.E. ಸೊಸೈಟಿ) ವಿದ್ಯಾರ್ಥಿನಿ ಕುಮಾರಿ ಅನುಪಮಾ ಹೊಳ್ಳ ಅವರು ಪ್ರಥಮ ವರ್ಷದ ಬಿ.ಎಡ್ (ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ 8.75 ಎಸ್.ಜಿ.ಪಿ.ಎ. (SGPA) ಅಂಕಗಳನ್ನು ಪಡೆದು ಕಾಲೇಜಿಗೆ ಮೊದಲ ಸ್ಥಾನ ಗಳಿಸಿ ಕೀರ್ತಿ ತಂದಿದ್ದಾರೆ. ಈ ಸಾಧನೆಯು ಕಾಲೇಜು ಮತ್ತು ಅವರ ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ.
ಅನುಪಮಾ ಹೊಳ್ಳ ಅವರು ರಾಜ್ಯ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಗೋಪಾಲಕೃಷ್ಣ ಹೊಳ್ಳ ವಂಡ್ಸೆ ಅವರ ಮಗಳಾಗಿದ್ದಾರೆ. ಇವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಾಲಿಗ್ರಾಮದವರು. ಈ ಸಾಧನೆಯ ಮೂಲಕ ಅವರು ತಮ್ಮ ಹುಟ್ಟೂರಿಗೂ ಗೌರವ ತಂದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಅನುಪಮಾ ಹೊಳ್ಳ ಅವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಧ್ಯಾಪಕರು ಮತ್ತು ಸಹಪಾಠಿಗಳು ಅಭಿನಂದನೆ ಸಲ್ಲಿಸಿದ್ದಾರೆ.