
ಉಡುಪಿ : ಪುತ್ತಿಗೆ – ಬೊಮ್ಮರಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಪುತ್ತಿಗೆ ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸುಗುಣೀಂದ್ರತೀರ್ಥ ಶ್ರೀಪಾದರು ಮತ್ತು ಶಿಷ್ಯರಾದ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರ ಆದೇಶದಂತೆ ವಾರ್ಷಿಕ ಜಾತ್ರಾ ಮಹೋತ್ಸವ ಏಪ್ರಿಲ್ 12ರಿಂದ 16ರವರೆಗೆ ವೈಭವದಿಂದ ನಡೆಯಲಿದೆ.
ಇಂದು ಏಪ್ರಿಲ್ 14, ಸೋಮವಾರ ದೇವಳದ ಪ್ರಮುಖ ಆಕರ್ಷಣೆಯಾದ ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ಭಕ್ತರುಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಸಿರಿಮುಡಿಗಂಧ ಪ್ರಸಾದಗಳನ್ನು ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನ ಅರ್ಚಕರು ಮತ್ತು ಊರಿನ ಹತ್ತು ಸಮಸ್ತರು ಪುತ್ತಿಗೆ, ಬೊಮ್ಮರಬೆಟ್ಟು ವ್ಯವಸ್ಥಾಪಕರು ಶ್ರೀಪುತ್ತಿಗೆ ಮಠ ಇವರುಗಳು ಮನವಿ ಮಾಡಿದ್ದಾರೆ.