
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ ) ನೇತ್ರಾವತಿ ವಲಯ ಕರ್ನಾಟಕ
ಆತ್ರಾಡಿ : ವಿವೇಕಾನಂದ ಯೋಗ ಶಾಖೆ ಆತ್ರಾಡಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಸವ್ಯಸಾಚಿ ಶಿಶು ಮಂದಿರದ ಸಭಾಂಗಣದಲ್ಲಿ ಪಾದೆಕಲ್ ವಿಷ್ಣು ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಗಳಾದ ಯೋಗ ಗುರು ಶ್ರೀ ಸುದರ್ಶನ್ ರವರು ಶ್ರೀ ರಾಮಸ್ವಾಮಿಯವರಿಂದ 45 ವರ್ಷಗಳ ಹಿಂದೆ ಸ್ಥಾಪನೆಗೊಂಡ ಪತಂಜಲಿ ಯೋಗ ಸಂಸ್ಥೆಯು “ಸಂಸ್ಕಾರ ಸಂಘಟನೆ ಸೇವೆ ” ಎಂಬ ದ್ಯೇಯ ವಾಕ್ಯದಡಿಯಲ್ಲಿ ಮಾಡುತ್ತಿರುವ ಉಚಿತ ಯೋಗ ಶಿಕ್ಷಣದ ವಿಚಾರವನ್ನು ತಿಳಿಸಿದರು.

ವೇದಿಕೆಯಲ್ಲಿ ಸ್ಥಳೀಯ ಪ್ರಮುಖ ಶ್ರೀ ಹರೀಶ್ ಹೆಗ್ಡೆ ಪರೀಕ, ರಾಜoಗಣ ಶಾಖೆಯ ಶ್ರೀಮತಿ ಲಲಿತಾ ಕೇದ್ಲಾಯ, ಡಾ। ದೀಪ್ತಿ ಉದಯಪುರ, ಹಿರಿಯರಾದ ಶ್ರೀ ರಮಾನಾಥ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರದಲ್ಲಿ ಯೋಗ ಸಮಿತಿಯ ಜಿಲ್ಲಾ ಪ್ರಮುಖರಾದ ಶ್ರೀ ಗುರುರಾಜ ರಾವ್, ಶ್ರೀ ಮೋಹನ್ ರಾವ್ ಮಾರ್ಪಳ್ಳಿ, ಶ್ರೀಮತಿ ವಾಣಿ, ಶ್ರೀಮತಿ ಸುಷ್ಮಾ, ಮತ್ತು ಉಡುಪಿ ಅಭಿರಾಮ ಧಾಮ ಶಾಖೆಯ ಸದಸ್ಯರು , ಸ್ಥಳೀಯ ಪ್ರಮುಖ ರಾದ ಹರೀಶ್ ಮೆಡಿಕಲ್, ರತ್ನಾಕರ ಶೆಟ್ಟಿ, ಗಂಗಾಧರ್ ಪ್ರಭು ಜಡ್ಡು, ಬಾಲಕೃಷ್ಣ ಹೆಗ್ಡೆ,ಸದಾಶಿವ ನಾಯಕ್, ಅಪ್ಪು ನಾಯಕ್, ರಾಜೀವ ಕರ್ಕೇರ ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಅಶೋಕ್ ಕಾಂಚನ್ ರವರ ನೇತೃತ್ವದಲ್ಲಿ ಯೋಗ ಬಂದುಗಳಿಂದ ಭಜನೆ ಕಾರ್ಯಕ್ರಮ ನಡೆಯಿತು. ಶ್ರೀ ಕೃಷ್ಣ ಮೂರ್ತಿ ಪ್ರಭುರವರು ಗತ ವರ್ಷದ ವರದಿಯನ್ನು ಸಭೆಯ ಮುಂದಿಟ್ಟರು. ಸವ್ಯ ಸಾಚಿ ಶಿಶು ಮಂದಿರದ ಪುಟಾಣಿಗಳು ಸಂಸ್ಕೃತ ಭಾಷಾ ಹಾಡಿನ ನೃತ್ಯ ಮತ್ತು ಮಂಕು ತಿಮ್ಮನ ಕಗ್ಗದ ಹಾಡನ್ನು ಹಾಡಿದರು. ಅಭಿರಾಮದಾಮ ಶಾಖೆ ಉಡುಪಿ ಇದರ ಮಕ್ಕಳಿಂದ ಯೋಗ ನೃತ್ಯ ಕಾರ್ಯಕ್ರಮ ನಡೆಯಿತು. ಮತ್ತು ಸಾಮೂಹಿಕ ಭಕ್ತಿ ಗೀತೆಯನ್ನು ಹಾಡಿದರು.
ಯೋಗ ಬಂಧು ಶ್ರೀಮತಿ ಪ್ರಮೀಳಾ ಶೆಟ್ಟಿಗಾರ್ ರವರು ಎಲ್ಲರನ್ನೂ ಸ್ವಾಗತಿಸಿದರು. ಯೋಗ ಬಂಧು ಶ್ರೀಮತಿ ಕುಸುಮರವರು ಎಲ್ಲರಿಗೂ ಧನ್ಯವಾದವನ್ನಿತ್ತರು. ಶ್ರೀ ಅಶೋಕ್ ಕಾಂಚನ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.