
ಚೆನ್ನೈ: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಕೊಯಮತ್ತೂರಿನಲ್ಲಿ ಮಾತನಾಡಿದ ಅವರು, “ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಹೊಸ ಅಧ್ಯಕ್ಷರ ಆಯ್ಕೆಗೆ ಸಹಕರಿಸುತ್ತೇವೆ” ಎಂದು ತಿಳಿಸಿದ್ದಾರೆ.
ಅವರು ಯಾವುದೇ ರಾಜಕೀಯ ಊಹಾಪೋಹಗಳಿಗೆ ಸ್ಪಂದಿಸಲು ನಿರಾಕರಿಸಿದ್ದು, “ಪಕ್ಷದ ಉಜ್ವಲ ಭವಿಷ್ಯವೇ ನನ್ನ ಆಶಯ. ನನ್ನ ಹುದ್ದೆ ರಾಜೀನಾಮೆ ಬಿಟ್ಟು, ನಾನು ಪಕ್ಷದ ಬೆಳೆವಣಿಗೆಯಲ್ಲಿ ಮುಂದುವರಿಯುತ್ತೇನೆ” ಎಂದು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಸಾಮರಸ್ಯದ ಮೂಲಕ ನಾಯಕರು ಆಯ್ಕೆಯಾಗುತ್ತಾರೆ ಎಂದು ಸ್ಪಷ್ಟಪಡಿಸಿದ ಅಣ್ಣಾಮಲೈ, ಇತರ ಪಕ್ಷಗಳಲ್ಲಿ ನೂರಾರು ಅರ್ಜಿಗಳು ಬಂದರೂ ನಮ್ಮಲ್ಲಿ ಒಗ್ಗಟ್ಟಿದೆ ಎಂಬ ಸಂದೇಶವನ್ನೂ ನೀಡಿದ್ದಾರೆ.
2023ರಲ್ಲಿ ಎಐಎಡಿಎಂಕೆ–ಬಿಜೆಪಿ ಒಡನಾಟದಲ್ಲಿ ಭಿನ್ನಾಭಿಪ್ರಾಯ ಎದ್ದ ಬಳಿಕ, ಇದೀಗ ಮೈತ್ರಿ ಮಾತುಕತೆ ಚುರುಕುಗೊಂಡಿದೆ. ಜಾತಿ ಸಮೀಕರಣಗಳನ್ನು ಸಮೀಕ್ಷಿಸಿ ಪಕ್ಷ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಹಿನ್ನೆಲೆಯಲ್ಲಿಯೇ ಈ ರಾಜೀನಾಮೆ ಆಗಿದೆ ಎಂದು ಮೂಲಗಳು ತಿಳಿಸಿವೆ.