


ಹಿರಿಯಡ್ಕ:ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ತಾ 01.03.2025 ಶನಿವಾರದಿಂದ ತಾ 03.03.2025 ಸೋಮವಾರದವರೆಗೆ ಕಾಲಾವಧಿ ನೇಮೋತ್ಸವವು ನಡೆಯಲಿರುವುದು.
ತಾ 01.03.2025 ರಂದು ರಾತ್ರಿ ಅಗಲುಸೇವೆ ಹಾಗೂ ತಾ 02.03.2025 ರಂದು ರವಿವಾರ ರಾತ್ರಿ ನಡೆಯುವ ಮಹಾಪೂಜೆ ಹಾಗೂ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ , ಸಾರ್ವಜನಿಕ ಅನ್ನಸಂತರ್ಪಣೆ ,ಶ್ರೀ ಮಹಾಮಾಯಿ ದೇವಿದರ್ಶನ, ಶಿವರಾಯ ದರ್ಶನ, ಹುಲಿ ಚಾಮುಂಡಿ ಕೋಲ, ಧೂಮವತಿ ಕೋಲ ಹಾಗೂ ಮಾಯಂದಲೆ ಕೋಲದೊಂದಿಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅತೀ ವಿಜ್ರಂಭಣೆಯಿಂದ ನಡೆಯಲಿವೆ.
ಭಕ್ತಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ ತನು ಮನ ಧನಗಳಿಂದ ಸಹಕರಿಸಿ, ಶ್ರೀ ದೇವರ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ಕ್ಷೇತ್ರದ ಶ್ರೀ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಗರಡಿಯ ಆಡಳಿತ ವರ್ಗ, ಸದಸ್ಯರು ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.