ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೆಪ್ಟೆಂಬರ್ 6 ರಂದು ಅನಂತ ಚತುರ್ದಶಿ ವ್ರತಾಚರಣೆ

Date:

spot_img

ಉಡುಪಿ: ಪಣಿಯಾಡಿಯ ಶ್ರೀ ಲಕ್ಷ್ಮೀ ಅನಂತಾಸನ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೆಪ್ಟೆಂಬರ್ 6, 2025 ರಂದು ಅನಂತ ಚತುರ್ದಶಿ ವ್ರತಾಚರಣೆ (ನೊಂಪು) ವಿಶೇಷವಾಗಿ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ‘ಅನಂತ ಕದಳಿ ಸಮರ್ಪಣೆ’ ಎಂಬ ವಿಶೇಷ ಸೇವೆಯನ್ನು ಅರ್ಪಿಸುವ ಅವಕಾಶವಿದೆ.

ದೇಗುಲದಲ್ಲಿ ನಡೆಯಲಿರುವ ಧಾರ್ಮಿಕ ವಿಧಿ-ವಿಧಾನಗಳು:

  • ಬೆಳಿಗ್ಗೆ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಹಾಗೂ ಕಲ್ಪೋಕ್ತ ಪೂಜೆಗಳು ನೆರವೇರಲಿವೆ.
  • ನಂತರ ಮಹಾಪೂಜೆ ನಡೆಯಲಿದೆ.
  • ಅನಂತ ವಿಪ್ರ ಬಳಗದ ಸದಸ್ಯರು ವಿಷ್ಣು ಸಹಸ್ರನಾಮ, ಲಕ್ಷ್ಮೀ ಶೋಭಾನೆ ಹಾಗೂ ಗೀತಾ ಪಾರಾಯಣಗಳನ್ನು ನಡೆಸಿಕೊಡಲಿದ್ದಾರೆ.

ವ್ರತಾಚರಣೆಯ ಮಹತ್ವ ಮತ್ತು ಇತರೆ ಕಾರ್ಯಕ್ರಮಗಳು:

  • ವ್ರತಧಾರಿಗಳಿಗೆ ಅನಂತ ಸೂತ್ರಧಾರಣೆ ಸಮಾರಂಭದ ನಂತರ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
  • ಮಧ್ಯಾಹ್ನ ವಿವಿಧ ಭಜನಾ ತಂಡಗಳಿಂದ ಭಜನಾ ಗಾಯನ ಮತ್ತು ಕೊಳಲುವಾದನ ಕಾರ್ಯಕ್ರಮಗಳು ಇರಲಿವೆ.
  • ರಾತ್ರಿ ಹೂವಿನ ಪೂಜೆ, ರಂಗಪೂಜೆ, ಮತ್ತು ಅಷ್ಟಾವಧಾನ ಸೇವೆಗಳು ನಡೆಯಲಿವೆ.

ದೇವಾಲಯದ ಆಡಳಿತ ಮಂಡಳಿಯು, ಈ ಶುಭ ಕಾರ್ಯಕ್ರಮಗಳಲ್ಲಿ ಸಕಲ ಸಧ್ಭಕ್ತರು ಸಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಲು ಸಕಲ ಭಕ್ತಾದಿಗಳನ್ನು ಆಹ್ವಾನಿಸಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ತನು, ಮನ, ಧನಗಳಿಂದ ಸಹಕರಿಸುವಂತೆ ಕೋರಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.