ಆನಂದ ತೀರ್ಥ ವಿದ್ಯಾಲಯದಲ್ಲಿ ಇಂಟರ್ಯಾಕ್ಟ್ ಕ್ಲಬ್‌ಗೆ ಚಾಲನೆ!

Date:

spot_img

ಪಾಜಕ, ಜುಲೈ 23 : ಸಮಾಜಸೇವೆ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ರೋಟರಿ ಕ್ಲಬ್ ಮಣಿಪಾಲ್ ಟೌನ್ ಆಶ್ರಯದಲ್ಲಿ ಆನಂದ ತೀರ್ಥ ವಿದ್ಯಾಲಯದಲ್ಲಿ 2026–27ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್‌ನ ಉದ್ಘಾಟನಾ ಸಮಾರಂಭವು ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಮಣಿಪಾಲ್ ಟೌನ್‌ನ ಅಧ್ಯಕ್ಷರಾದ ರೋ. ಡಾ. ನವೀನ್ ಕುಮಾರ್ ಕೊಡಮಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋ. ನಿತ್ಯಾನಂದ ನಾಯಕ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂಟರ್ಯಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಅತ್ಯುತ್ತಮ ವೇದಿಕೆಗಳಾಗಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಪ್ರಧಾನ ಮಾಡಲಾಯಿತು ಹಾಗೂ ಎಲ್ಲಾ ಸದಸ್ಯರಿಗೆ ಇಂಟರ್ಯಾಕ್ಟ್ ಕ್ಲಬ್‌ನ ಪ್ರಮಾಣವಚನವನ್ನು ಬೋಧಿಸಲಾಯಿತು. ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳುವ ಸಂಕಲ್ಪ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ನಡೆದ ವಿಶೇಷ ಉಪನ್ಯಾಸದಲ್ಲಿ ರೋ. ಹೇಮಂತ್ ಯು. ಕಾಂತ್ ಅವರು “ತಂಡ ಸಬಲೀಕರಣ” ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ, ಪರಿಣಾಮಕಾರಿ ಸಂವಹನ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣಗಳು ಹಾಗೂ ಪರಸ್ಪರ ಸಹಕಾರದ ಮೂಲಕ ಜೀವನದ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಬಹುದೆಂದು ಅವರು ಪ್ರೇರಣಾದಾಯಕವಾಗಿ ವಿವರಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಉಪನ್ಯಾಸವನ್ನು ಆಲಿಸಿ ಸಂವಾದದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ರೋ. ಡಾ. ದೀಪಕ್ ರಾಮ್ ಬಾಯರಿ, ಶಾಲಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಹರಿ ಭಟ್, ಶಾಲಾ ಪ್ರಾಂಶುಪಾಲರಾದ ಡಾ. ಗೀತಾ ಶಶಿಧರ್, ಇಂಟರ್ಯಾಕ್ಟ್ ಕ್ಲಬ್‌ನ ಸಂಯೋಜಕಿಯರಾದ ಶ್ರೀಮತಿ ಸುನಾಲಿನಿ ಹಾಗೂ ಶ್ರೀಮತಿ ಮಮತಾ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೌಟುಂಬಿಕ ಕಲಹಕ್ಕೆ ಮನನೊಂದು ನವವಧು ದುರಂತ ಅಂತ್ಯ!

ಹೊಸ ಬಾಳಿಗೆ ಕಾಲಿಟ್ಟ ಕೆಲವೇ ತಿಂಗಳಲ್ಲಿ ದುರಂತ: ಕುಟುಂಬದ ಕಿರುಕುಳಕ್ಕೆ ಬೇಸತ್ತು...

ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ಈ 5 ನಾಯಕರಿಗೆ ಮಂತ್ರಿಗಿರಿ ಖಚಿತ!

ಹೈಕಮಾಂಡ್‌ನಿಂದ ಹಸಿರು ನಿಶಾನೆ: ಸಂಪುಟಕ್ಕೆ ಸೇರ್ಪಡೆಯಾಗಲಿರುವ ಆ 5 ಪ್ರಮುಖ ನಾಯಕರು...

ಭಾರತಕ್ಕೆ ಬರಲಿವೆ ಪ್ಲಾಸ್ಟಿಕ್ ನೋಟು: ಹಳೆಯ ಕಾಗದದ ನೋಟು ಏನಾಗುತ್ತೆ?

ಕಾಗದದ ನೋಟುಗಳಿಗೆ ಶೀಘ್ರದಲ್ಲೇ ಗುಡ್‌ಬೈ: ಹಳೆಯ ನೋಟುಗಳ ಕುರಿತು ಗೊಂದಲ ಬೇಡ...

ಮ್ಯಾರಥಾನ್ ಮಧ್ಯೆ ಋತುಸ್ರಾವ: ಮುಜುಗರವಿಲ್ಲದೆ 21 ಕಿ.ಮೀ ಓಟ ಪೂರ್ಣ!

ಋತುಸ್ರಾವಕ್ಕೆ ಹಿಂಜರಿಯದೆ ಮ್ಯಾರಥಾನ್ ಓಡಿದ ಕ್ರೀಡಾಪಟು: ನಿಸರ್ಗಸಹಜ ಕ್ರಿಯೆಗೆ ಸಡ್ಡು ಹೊಡೆದ...