
ಅಂಬಲಪಾಡಿ: ಇಲ್ಲಿನ ಪಡುಪಾಲು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ನೇಮೋತ್ಸವ ಸಮಿತಿಯ ವತಿಯಿಂದ, ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಭವ್ಯ ನೇಮೋತ್ಸವವು ಏಪ್ರಿಲ್ 18 ಶನಿವಾರ ಮತ್ತು ಏಪ್ರಿಲ್ 19 ರವಿವಾರ ಅಂಬಲಪಾಡಿ ಬಂಕೇರಕಟ್ಟದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ನೇಮೋತ್ಸವ ಸಮಿತಿಯ ಅಧ್ಯಕ್ಷರಾದ ಪಠೇಲರ ಮನೆ ಎ. ಜಯಕರ ಶೆಟ್ಟಿ ಅಂಬಲಪಾಡಿ ಅವರ ನೇತೃತ್ವದಲ್ಲಿ ಹಾಗೂ ಗೌರವಾಧ್ಯಕ್ಷರಾದ ಡಾ. ನಿ.ಬೀ. ವಿಜಯ ಬಲ್ಲಾಳ್ ಅವರ ಮಾರ್ಗದರ್ಶನದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.
ಕಾರ್ಯಕ್ರಮಗಳ ವಿವರ ಮತ್ತು ಸಮಯ:
ಏಪ್ರಿಲ್ 18, ಶನಿವಾರ:
- ಬೆಳಿಗ್ಗೆ 7.30: ಮಹಾ ಚಪ್ಪರದ ಗಜಕಂಬ ಪ್ರತಿಷ್ಠೆ.
- ಮಧ್ಯಾಹ್ನ 12.00: ಮಹಾ ಚಪ್ಪರದ ಆರೋಹಣ.
- ಮಧ್ಯಾಹ್ನ 12.30: ನೇಮೋತ್ಸವ ಚಪ್ಪರದ ಬಳಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ.
- ಸಂಜೆ 4.00: ದೈವಸ್ಥಾನದಲ್ಲಿ ಮಹಾಪೂಜೆ ಮತ್ತು ಶ್ರೀ ದೈವಗಳ ದರ್ಶನ ಸೇವೆ.
- ಸಂಜೆ 5.00: ದೈವಸ್ಥಾನದಿಂದ ಮಹಾಚಪ್ಪರಕ್ಕೆ ಮುಖಮೂರ್ತಿ ಬಂಡಾರಗಳ ಭವ್ಯ ಮೆರವಣಿಗೆ.
- ರಾತ್ರಿ 9.00: ಶ್ರೀ ಬಬ್ಬುಸ್ವಾಮಿ ದೈವದ ನೇಮೋತ್ಸವ.
- ರಾತ್ರಿ 12.00: ತನ್ನಿಮಾನಿಗ ದೇವಿಯ ನೇಮೋತ್ಸವ.
ಏಪ್ರಿಲ್ 19, ರವಿವಾರ:
- ಬೆಳಿಗ್ಗೆ 9.00: ಶ್ರೀ ಧೂಮಾವತಿ ಬಂಟ ದೈವಗಳ ನೇಮ.
- ಮಧ್ಯಾಹ್ನ 12.00: ಶ್ರೀ ಮಹಾ ಗುಳಿಗದ್ವಯ ದೈವಗಳ ನೇಮ.
- ಸಂಜೆ 4.00: ಶ್ರೀ ಕೊರಗಜ್ಜ ದೈವದ ನೇಮೋತ್ಸವ.
- ಸಂಜೆ 5.00: ಪ್ರಸಾದ ವಿತರಣೆ.
ಗ್ರಾಮಸ್ಥರು, ಹತ್ತು ಸಮಸ್ತರು ಹಾಗೂ ಊರ-ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ನೇಮೋತ್ಸವ ಸಮಿತಿ ಮತ್ತು ಗುರಿಕಾರರು ವಿನಂತಿಸಿದ್ದಾರೆ.


















