ಮಹಾರಾಷ್ಟ್ರದ ರಾಜಕೀಯ ಧೀಮಂತ ಅಸ್ತಂಗತ: ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ದಾರುಣ ಸಾವು

Date:

spot_img

ಮುಂಬಯಿ : ಮಹಾರಾಷ್ಟ್ರ ರಾಜಕಾರಣದ ದ್ರುವತಾರೆ, ಆಡಳಿತ ಚತುರ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಬುಧವಾರ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಕಾಲಿಕ ಮರಣಕ್ಕೀಡಾಗಿದ್ದಾರೆ. ಆಶ್ಚರ್ಯವೆಂದರೆ, ತಮ್ಮ ರಾಜಕೀಯ ಜೀವನದ ಏರಿಳಿತಗಳಿಗೆ ಸಾಕ್ಷಿಯಾಗಿದ್ದ ಹಾಗೂ ಸತತ 8 ಬಾರಿ ವಿಜಯಪತಾಕೆ ಹಾರಿಸಿದ್ದ ಸ್ವಕ್ಷೇತ್ರ ಬಾರಾಮತಿಯ ಮಣ್ಣಿನಲ್ಲೇ ಅವರು ಕೊನೆಯುಸಿರೆಳೆದಿರುವುದು ಅಭಿಮಾನಿಗಳಲ್ಲಿ ತೀವ್ರ ಶೋಕ ತರಿಸಿದೆ. “ಅಜಿತ್ ದಾದಾ” ಎಂದೇ ಜನಪ್ರಿಯರಾಗಿದ್ದ ಅವರು, ಮೌಲ್ಯಯುತ ರಾಜಕಾರಣಕ್ಕಿಂತಲೂ ಪ್ರಾಯೋಗಿಕ ಮತ್ತು ತಂತ್ರಗಾರಿಕೆಯ ರಾಜಕೀಯಕ್ಕೆ ಹೆಸರಾಗಿದ್ದರು.

1959, ಜುಲೈ 22 ರಂದು ಜನಿಸಿದ ಅಜಿತ್ ಪವಾರ್, ಸಹಕಾರಿ ವಲಯದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವರು. ಶರದ್ ಪವಾರ್ ಅವರ ನೆರಳಿನಲ್ಲಿ ಬೆಳೆದರೂ, ನಂತರದ ದಿನಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಅಸ್ತಿತ್ವ ಕಂಡುಕೊಂಡರು. 1991 ರಲ್ಲಿ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶಿಸಿದ ಇವರು, ನಂತರ ದೊಡ್ಡಪ್ಪ ಶರದ್ ಪವಾರ್‌ಗಾಗಿ ಸ್ಥಾನ ಬಿಟ್ಟುಕೊಟ್ಟು ವಿಧಾನಸಭಾ ರಾಜಕಾರಣಕ್ಕೆ ಮರಳಿದರು. ಅಲ್ಲಿಂದ ಆರಂಭವಾದ ಅವರ ವಿಜಯಯಾತ್ರೆ ಸತತ ಎಂಟು ಬಾರಿ ಮುಂದುವರಿದಿತ್ತು. ನೀರಾವರಿ, ಗ್ರಾಮೀಣಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವರಾಗಿ ಅವರು ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದರು.

ಅಜಿತ್ ಪವಾರ್ ಅವರ ರಾಜಕೀಯ ಜೀವನದ ಅತ್ಯಂತ ಸಂಚಲನಾತ್ಮಕ ನಿರ್ಧಾರವೆಂದರೆ ಶರದ್ ಪವಾರ್ ಅವರ ವಿರುದ್ಧದ ಬಂಡಾಯ. 2019 ರಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು, ಕೇವಲ 80 ಗಂಟೆಗಳಲ್ಲಿ ಸರ್ಕಾರ ಪತನಗೊಂಡ ನಂತರ ಮರಳಿ ಎನ್‌ಸಿಪಿಗೆ ಬಂದಿದ್ದರು. ಆದರೆ, 2024 ರ ಅವಧಿಯಲ್ಲಿ ಮತ್ತೆ ಬಂಡಾಯವೆದ್ದು, ಅಧಿಕೃತ ಎನ್‌ಸಿಪಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆರು ಬಾರಿ ಉಪಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಪವಾರ್, ಪತ್ನಿ ಸುನೇತ್ರಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನವು ಮರಾಠಾ ರಾಜಕಾರಣದ ಒಂದು ದೊಡ್ಡ ಶಕ್ತಿಯ ಅಂತ್ಯಕ್ಕೆ ನಾಂದಿ ಹಾಡಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.