
18 ವರ್ಷಗಳಿಂದ ಕಾಡುತ್ತಿದ್ದ ಫಲವತ್ತತೆ ಸಮಸ್ಯೆಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಶಾಕಿರಣವಾಗಿದೆ. ಅತಿ ಕಡಿಮೆ ವೀರ್ಯಾಣುಗಳ ಸಮಸ್ಯೆಯಿಂದ ಬಳಲುತ್ತಿದ್ದ ಪತಿಯ ವೀರ್ಯವನ್ನು AI ವ್ಯವಸ್ಥೆ ಯಶಸ್ವಿಯಾಗಿ ಗುರುತಿಸಿದ್ದು, ಈ ದಂಪತಿಗೆ ಮಕ್ಕಳನ್ನು ಪಡೆದುಕೊಳ್ಳಲು ನೆರವಾಗಿದೆ.
ಹಲವಾರು IVF ಕೇಂದ್ರಗಳಲ್ಲಿ ಪ್ರಯತ್ನಿಸಿ ಫಲಿತಾಂಶ ಸಿಗದ ನಂತರ, ಈ ದಂಪತಿ ಕೊಲಂಬಿಯಾ ವಿಶ್ವವಿದ್ಯಾಲಯದ ಫಲವತ್ತತೆ ಕೇಂದ್ರವನ್ನು ಸಂಪರ್ಕಿಸಿದ್ದರು. ವೈದ್ಯರಿಗೆ ವೀರ್ಯಾಣುಗಳನ್ನು ಗುರುತಿಸುವುದು ಕಷ್ಟಕರವಾಗಿತ್ತು, ಆದರೆ AI ತಂತ್ರಜ್ಞಾನವು ಕೇವಲ ಒಂದೇ ಗಂಟೆಯಲ್ಲಿ 44 ವೀರ್ಯಾಣುಗಳನ್ನು ಪತ್ತೆ ಹಚ್ಚುವ ಮೂಲಕ ಪವಾಡ ಮಾಡಿದೆ. ಈ ಹೊಸ ಆವಿಷ್ಕಾರವು ಫಲವತ್ತತೆ ಸಮಸ್ಯೆಗಳನ್ನು ಎದುರಿಸುತ್ತಿರುವ ಅದೆಷ್ಟೋ ದಂಪತಿಗಳಿಗೆ ಭರವಸೆ ಮೂಡಿಸಿದೆ.