spot_img

ಅಹಮದಾಬಾದ್ ವಿಮಾನ ದುರಂತ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ !

Date:

spot_img

ಅಹಮದಾಬಾದ್: ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 265 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ 787-8 ಗ್ರೀಮ್ ಲೈನರ್ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹಮದಾಬಾದ್‌ನ ಮೆಡಿಕಲ್ ಕಾಲೇಜು ಕಾಂಪೌಂಡ್‌ಗೆ ಬಡಿದಿದೆ.

ಈ ಭೀಕರ ದುರಂತದಲ್ಲಿ ಭಾರತೀಯರೊಂದಿಗೆ ಬ್ರಿಟನ್, ಕೆನಡಾ ಮತ್ತು ಪೋರ್ಚುಗೀಸ್ ಪ್ರಜೆಗಳೂ ಸಾವನ್ನಪ್ಪಿದ್ದಾರೆ. ಓರ್ವ ಪ್ರಯಾಣಿಕ ಮಾತ್ರ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಮೃತರ ಪೈಕಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರೂ ಇದ್ದಾರೆ ಎಂಬ ಮಾಹಿತಿ ದೃಢವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಜೂನ್ 13ರಂದು ಬೆಳಿಗ್ಗೆ 9 ಗಂಟೆಗೆ ಅಹಮದಾಬಾದ್ ತಲುಪಿದ್ದು, ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಅವರು ಗಾಯಾಳುಗಳನ್ನು ನೋಡಲು ಸಿವಿಲ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್ ಎಂ ನಾಯ್ಡು ಹಾಗೂ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮೋದಿ ಅವರನ್ನು ಸ್ವಾಗತಿಸಿದರು.

ಘಟನೆ ನಡೆದ ತಕ್ಷಣವೇ ಪ್ರಧಾನಿ ಮೋದಿ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಗ್ರ ಮಾಹಿತಿ ಪಡೆದು, ತಕ್ಷಣದ ನೆರವು ಒದಗಿಸಲು ಸೂಚನೆ ನೀಡಿದ್ದರು. ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕೂಡ ಕಿಂಜರಪ್ಪು ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮಾಹಿತಿ ನೀಡಲಾಯಿತು.

ಅಮಿತ್ ಶಾ ಹಾಗೂ ನಾಯ್ಡು ಅಹಮದಾಬಾದ್‌ಗೆ ತುರ್ತಾಗಿ ತೆರಳಿದ್ದು, ಆಸ್ಪತ್ರೆಯಲ್ಲಿ ಗಾಯಾಳುಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ರಕ್ಷಣಾ ಕಾರ್ಯಾಚರಣೆ ಜೋರಾಗಿ ಸಾಗುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವೃತ್ತಿಪರ ಇಂಜಿನಿಯರ್ಗಳ ದಿನ

ಈ ದಿನವನ್ನು ಇಂಜಿನಿಯರ್ಗಳ ಅನ್ವೇಷಣೆ, ಸಾಧನೆ ಮತ್ತು ಸಮಾಜದ ಪ್ರಗತಿಗೆ ಅವರು ನೀಡುವ ಕೊಡುಗೆಗಳನ್ನು ಗೌರವಿಸಲು ನಿಗದಿಪಡಿಸಲಾಗಿದೆ

ಪ್ರೋಟಾನ್‌ನಿಂದ ‘ಲುಮೋ’ AI ಚಾಟ್‌ಬಾಟ್ ಬಿಡುಗಡೆ

ಸುರಕ್ಷಿತ ಇಮೇಲ್ ಮತ್ತು ವಿಪಿಎನ್‌ ಸೇವೆಗಳಿಗೆ ಹೆಸರುವಾಸಿಯಾಗಿರುವ ಪ್ರೋಟಾನ್ ಕಂಪನಿಯು, ಹೊಸ ಎಐ ಚಾಟ್‌ಬಾಟ್ ಒಂದನ್ನು ಬಿಡುಗಡೆ ಮಾಡಿದೆ. ‘ಲುಮೋ’ (Lumo) ಎಂದು ಹೆಸರಿಸಲಾದ ಈ ಚಾಟ್‌ಬಾಟ್ ಅನ್ನು ಗೌಪ್ಯತೆಯನ್ನು ಪ್ರಥಮ ಆದ್ಯತೆಯಾಗಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಹುಲಿಕಲ್ ಘಾಟಿಯಲ್ಲಿ ಮತ್ತೊಮ್ಮೆ ಭಾರೀ ಕುಸಿತ; ಶೀಘ್ರವೇ ಬೃಹತ್ ವಾಹನಗಳ ಸಂಚಾರ ನಿಷೇಧ ಸಾಧ್ಯತೆ!

ರಾಜ್ಯದ ಪ್ರಮುಖ ಘಾಟ್‌ಗಳಲ್ಲಿ ಒಂದಾದ ಹುಲಿಕಲ್ ಘಾಟ್ (ಬಾಳೆಬರೆ) ರಸ್ತೆಯಲ್ಲಿ ಮತ್ತೆ ದೊಡ್ಡ ಪ್ರಮಾಣದ ಕುಸಿತ ಸಂಭವಿಸಿದ್ದು, ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ಧರ್ಮಸ್ಥಳ ಪ್ರಕರಣ: 11ನೇ ಸ್ಥಳದಲ್ಲಿ ಶೋಧ ವಿಫಲ; 6ನೇ ಸ್ಥಳದ ಅಸ್ಥಿಪಂಜರ ಕೇಸ್ SITಗೆ ವರ್ಗಾವಣೆ!

ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಆಗಸ್ಟ್ 5ರಂದು ನಡೆಸಿದ ಶೋಧಕಾರ್ಯದಲ್ಲಿ ದೂರುದಾರರು ಗುರುತು ಮಾಡಿದ್ದ 11ನೇ ಸ್ಥಳದಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ.