
ಸುಭಾಷ್ ನಗರ : ದಿನಾಂಕ 12/07/2025 ರಂದು, ಸುಭಾಷ್ ನಗರ ರೋಟರಾಕ್ಟ್ ಕ್ಲಬ್ ವತಿಯಿಂದ ಪಂಜಿ ಮಾರುವಿನಲ್ಲಿ ಯುವ ಜನತೆಯನ್ನು ಕೃಷಿಯತ್ತ ಆಕರ್ಷಿಸುವ ಮಹತ್ತರ ಉದ್ದೇಶದಿಂದ ಭತ್ತ ನಾಟಿ ಮಾಡುವ ಕಾರ್ಯಕ್ರಮವನ್ನು ಎರಡನೇ ಬಾರಿಗೆ ಆಯೋಜಿಸಲಾಗಿತ್ತು. ನಿವೃತ್ತ ಶಿಕ್ಷಕರಾದ ಮೋಹನ್ ದಾಸ್ ಶೆಟ್ಟಿ ಮತ್ತು ಭಾರತಿ ಶೆಟ್ಟಿ ಅವರ ಪೂರ್ಣ ಸಹಯೋಗದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ, ಕಾರ್ಯಕ್ರಮಕ್ಕೆ ತಮ್ಮ ಗದ್ದೆಯನ್ನು ನೀಡಿ ಸಂಪೂರ್ಣ ಸಹಕಾರ ನೀಡಿದ ಭಾರತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾದ ಅವಿನಾಶ್ ಆಚಾರ್ಯ, ಕಾರ್ಯದರ್ಶಿ ಭಾರತ್ ಶೆಟ್ಟಿ, ಸಭಾಪತಿ ಗ್ಲಾಡ್ ಕುಂದರ್, ಜಿಲ್ಲಾ ಕ್ಲಬ್ ಸರ್ವಿಸ್ ಡೈರೆಕ್ಟರ್ ಭರತ್ ಸೇರಿದಂತೆ ಸಂಸ್ಥೆಯ ಅನೇಕ ಸದಸ್ಯರು ಉಪಸ್ಥಿತರಿದ್ದರು. ಯುವ ಪೀಳಿಗೆಯನ್ನು ಕೃಷಿಯತ್ತ ಪ್ರೇರೇಪಿಸುವ ರೋಟರಾಕ್ಟ್ ಕ್ಲಬ್‌ನ ಈ ಪ್ರಯತ್ನವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.