
ಹೆಬ್ರಿ : ಹೆಬ್ರಿಯ ಇಂದಿರಾನಗರದಲ್ಲಿರುವ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಇದೇ ಬರುವ ಏಪ್ರಿಲ್ 27, 2025ರಂದು (ಆದಿತ್ಯವಾರ) ಭಕ್ತಿಪೂರ್ಣವಾಗಿ ಅಗೆಲು ಸೇವೆ ನಡೆಯಲಿದೆ. ಶ್ರೀ ಸ್ವಾಮಿ ಕೊರಗಜ್ಜನಿಗೆ ಪ್ರಿಯವಾದ ಈ ವಿಶೇಷ ಸೇವೆಯು ಸಂಜೆ 7:00 ಗಂಟೆಯಿಂದ ಆರಂಭವಾಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಶ್ರೀ ಅಜ್ಜನ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರದ ಆರಾಧಕರಾದ ಸಂತೋಷ್ ಸ್ವಾಮೀಯವರು ವಿನಂತಿಸಿದ್ದಾರೆ.
ಕಾರ್ಯಕ್ರಮದ ವಿವರ:
ಸಂಜೆ 7:00 – ಭಜನಾ ಕಾರ್ಯಕ್ರಮ
8:00 ಗಂಟೆಗೆ – ಅಗೆಲು ಸೇವೆ
8:30 ಗಂಟೆಗೆ – ಗಂಧ ಪ್ರಸಾದ ವಿತರಣೆ
9:00 ಗಂಟೆಗೆ – ಅನ್ನಪ್ರಸಾದ ವಿತರಣೆ
ಸೂಚನೆ:
ಅಗೆಲು ಸೇವೆ ನೀಡಲು ಇಚ್ಛಿಸುವ ಭಕ್ತರು ದಿನಾಂಕ 26-04-2025ರ ಒಳಗಾಗಿ ತಮ್ಮ ಹೆಸರನ್ನು ಕ್ಷೇತ್ರದ ಆರಾಧಕರಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಸೇವೆಯ ಶುಲ್ಕ ₹1000/- ನಿಗದಿಯಾಗಿರುತ್ತದೆ.
ಸಂಪರ್ಕಿಸಿರಿ:
ಸಂತೋಷ್ ಸ್ವಾಮೀ, ಕೊರಗಜ್ಜ ಆರಾಧಕರು,
ಇಂದಿರಾನಗರ, ಹೆಬ್ರಿ
ದೂರವಾಣಿ: 9741847983 / 9449712251