
ಮುಂಬೈ: ಗ್ರಾಹಕರು ತಮ್ಮ ಖಾತೆ ಹೊಂದಿರುವ ಬ್ಯಾಂಕುಗಳ ಹೊರತುಪಡಿಸಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಹಣ ತೆಗೆಯಲು ಹೆಚ್ಚುವರಿ ಶುಲ್ಕ ನೀಡಬೇಕಾಗಿದೆ. ನೂತನ ಶುಲ್ಕ ಮೇ 1 ರಿಂದ ಜಾರಿಗೆ ಬರಲಿದೆ.
ಈ ಹೊಸ ನಿಯಮದ ಪ್ರಕಾರ, ಉಚಿತ 5 ವಹಿವಾಟುಗಳ ನಂತರ ಪ್ರತಿ ಹಣ ವಿತ್‌ಡ್ರಾವಿಗೆ ₹2 ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ಅಲ್ಲದೇ, ಹಣಕಾಸು ಹೊರತಾಗಿನ ವಹಿವಾಟಿನ ಶುಲ್ಕವನ್ನು ₹1ಗೆ ಪರಿಷ್ಕರಿಸಲಾಗಿದೆ.

ಎಟಿಎಂಗಳ ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಬ್ಯಾಂಕುಗಳು ತಿಳಿಸಿವೆ. 2021ರ ನಂತರ ಇದೇ ಮೊದಲ ಬಾರಿಗೆ ಎಟಿಎಂ ಸೇವಾ ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ಶುಲ್ಕವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.