
ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ನಟಿಯು ಮದುವೆಯಾದ ಮೂರೇ ತಿಂಗಳಿನಲ್ಲಿ ಡಿಆರ್‌ಐ (DRI) ಬಲೆಗೆ ಬಿದ್ದಿದ್ದು, ಇದಕ್ಕೆ ಪತಿಯೇ ಮಾಹಿತಿ ನೀಡಿರುವ ಶಂಕೆ ವ್ಯಕ್ತವಾಗಿದೆ.
ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿ ಅವರೇ ಚಿನ್ನ ಸಾಗಾಣಿಕೆ ಮಾಹಿತಿ ನೀಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ವಿದೇಶ ಪ್ರವಾಸ ವಿಷಯಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.ರನ್ಯಾ ಪದೇಪದೇ ದುಬೈ ಸೇರಿ ವಿದೇಶಗಳಿಗೆ ತೆರಳುತ್ತಿದ್ದರು ಎಂದು ಜತಿನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಇತ್ತ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟಿ ರನ್ಯಾ ಕಣ್ಣೀರಿಡುವಷ್ಟು ಸ್ಥಿತಿ ಎದುರಿಸಬೇಕಾಯಿತು. ರನ್ಯಾ ರಾವ್ ಗೆ ರಾಜಕಾರಣಿಗಳ ಸಂಪರ್ಕವಿದ್ದು, ಅವರ ಬಳಿ ಕೋಟಿ ಬೆಲೆಬಾಳುವ ವಜ್ರದ ನೆಕ್ಕಲೆಸ್ ಸೇರಿದಂತೆ ಐಷಾರಾಮಿ ಗಿಫ್ಟ್‌ಗಳು ಪತ್ತೆಯಾಗಿವೆ.
ನವೆಂಬರ್ 27, 2024 ರಂದು ರನ್ಯಾ ಹಾಗೂ ಜತಿನ್ ಅವರ ಮದುವೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ಅದ್ದೂರಿಯಾಗಿ ನಡೆದಿದ್ದು, ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯು ನ್ಯಾಯಾಂಗ ಬಂಧನದಲ್ಲಿದ್ದು, ತನಿಖೆ ಮುಂದುವರೆದಿದೆ.