
ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಅವರು ಆಗಸ್ಟ್ 4ರಂದು ತಮ್ಮ 27ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಡಿಸಿಕೊಂಡಿರುವ ಒಂದು ವಿಶೇಷ ಫೋಟೋಶೂಟ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಸ್ಟನ್ನಿಂಗ್ ಲುಕ್‌ಗೆ ಅಭಿಮಾನಿಗಳು ಮನಸೋತಿದ್ದಾರೆ.
ನಟಿ ಮೇಘಾ ಶೆಟ್ಟಿ ಅವರು ಫಿಟ್‌ನೆಸ್, ಡಯೆಟ್, ಯೋಗ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು, ಆಗಾಗ ತಮ್ಮ ಫೋಟೋಶೂಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ವೈರಲ್ ಆಗಿರುವ ಫೋಟೋಗಳಲ್ಲಿ ಅವರು ಹಸಿರು ಬಣ್ಣದ ಸೀರೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಯಾವುದೇ ವಿನ್ಯಾಸವಿಲ್ಲದ ಸರಳ ಹಸಿರು ಸೀರೆಯನ್ನು ಸ್ಲೀವ್‌ಲೆಸ್ ಬ್ಲೌಸ್‌ನೊಂದಿಗೆ ಧರಿಸಿ, ಕ್ಲಾಸಿಕ್ ಆಗಿಯೂ ಮಿಂಚಿದ್ದಾರೆ. ಅವರ ಅಂದಕ್ಕೆ ಈ ಸೀರೆ ಹೊಸ ಮೆರುಗು ನೀಡಿದಂತಿದೆ. ಸರಳ ಮೇಕಪ್, ಫ್ರೀ ಹೇರ್ ಸ್ಟೈಲ್ ಮತ್ತು ವಿಭಿನ್ನವಾದ ಮೂಗುತಿಯನ್ನು ಧರಿಸುವ ಮೂಲಕ ಅವರು ಹೆಚ್ಚು ಹೈಲೈಟ್ ಆಗಿದ್ದಾರೆ. ಸೀರೆಯನ್ನು ಕೂಡ ಬಹಳ ವಿಭಿನ್ನವಾಗಿ ತೊಟ್ಟಿದ್ದು, ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ. ಹಸಿರು ಬಣ್ಣದ ಬ್ಯಾಕ್‌ಗ್ರೌಂಡ್‌ನಲ್ಲಿ ನೈಟ್ ಎಫೆಕ್ಟ್‌ನಲ್ಲಿ ಈ ಫೋಟೋಶೂಟ್ ಮಾಡಿಸಿಕೊಂಡಿದ್ದು, ‘ಮೂಗುತಿ ಸುಂದರಿ’ಯಂತೆ ಕ್ಲಾಸಿಕಲ್ ಆಗಿಯೂ ಕಾಣಿಸುತ್ತಿದ್ದಾರೆ. ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.