
ಉಡುಪಿ: ಕಾಳಿಚ್ಚಿನ ಕಾರಣದಿಂದ ಚಾರಣಿಗರಿಗೆ ನಿರ್ಬಂಧಿಸಲಾಗಿದ್ದ ಕುದುರೆಮುಖ ವನ್ಯಜೀವಿ ವಿಭಾಗದ ಪ್ರಮುಖ ಚಾರಣ ಪಥಗಳನ್ನು ಇದೀಗ ಪ್ರವಾಸಿಗರಿಗಾಗಿ ಮತ್ತೆ ತೆರೆಯಲಾಗಿದೆ. ಮೇ 1ರಿಂದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹಪರ್ವತ, ಹಿಡ್ಲುಮನೆ ಫಾಲ್ಸ್ ಹಾಗೂ ಕೊಡಚಾದ್ರಿ ಟ್ರೆಕ್ ಮಾರ್ಗಗಳಲ್ಲಿ ಚಾರಣ ಸಾಧ್ಯವಾಗಲಿದೆ.
ಪ್ರಸ್ತುತ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಮಳೆಯಾಗಿರುವ ಕಾರಣದಿಂದ ಚಾರಣ ಮಾಡಲು ಸೂರಕ್ಷಿತ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಸಿಗರು ಕಡ್ಡಾಯವಾಗಿ aranyavihara.karnataka.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಚಾರಣಕ್ಕೆ ಹೊರಡಬಹುದಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.