spot_img

ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ : ಬೆಳ್ತಂಗಡಿಯಲ್ಲಿ ನಾಲ್ಕು ತಾಣಗಳಲ್ಲಿ ಸ್ಥಳ ಮಹಜರು

Date:

spot_img

ಬೆಳ್ತಂಗಡಿ: ಮೇ 27ರಂದು ನಡೆದಿದ್ದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಜೂನ್ 2ರಂದು ಬೆಳ್ತಂಗಡಿಯ ನಾಲ್ಕು ಪ್ರಮುಖ ಸ್ಥಳಗಳಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಬಂಧಿತರಾದ ಬಂಟ್ವಾಳ ತಾಲೂಕಿನ ಮುಂಡರ ಕೋಡಿ ನಿವಾಸಿ ದೀಪಕ್ (21) ಹಾಗೂ ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27) ಎಂಬವರನ್ನು ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿ ವಿಜಯ ಪ್ರಸಾದ್ ಅವರ ನೇತೃತ್ವದಲ್ಲಿ ಸ್ಥಳಗಳ ಪತ್ತೆ ಕಾರ್ಯಕ್ಕಾಗಿ ಬಿಗಿ ಭದ್ರತೆಯೊಂದಿಗೆ ಕರೆತರುವುದು ನಡೆದಿದ್ದು, ಗುರುವಾಯನಕೆರೆ ಅಂಗಡಿ, ಬೆಳ್ತಂಗಡಿ ಸಂತೆಕಟ್ಟೆ ಮೊಬೈಲ್ ಶಾಪ್, ಮೂರು ಮಾರ್ಗದ ಬಳಿ ಇರುವ ಚರಂಡಿ ಮತ್ತು ಉಜಿರೆಯ ನಿಡಿಗಲ್ ನದಿಯ ಬಳಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಪೊಲೀಸ್ ತನಿಖೆಯ ಪ್ರಕಾರ, ಕೊಲೆ ಮಾಡಿದ ಬಳಿಕ ಆರೋಪಿಗಳು ಬೈಕ್‌ನಲ್ಲಿ ಬೆಳ್ತಂಗಡಿ ಕಡೆಗೆ ಪ್ರಯಾಣಿಸಿ, ಮಾರ್ಗಮಧ್ಯದಲ್ಲಿ ಹೊಸ ರೈನ್‌ಕೋಟ್ ಖರೀದಿಸಿ, ಮೊಬೈಲ್ ಶಾಪ್‌ನಲ್ಲಿ ಹೊಸ ಸಿಮ್ ಕಾರ್ಡ್ ಪಡೆದುಕೊಂಡು ನಂತರ ಆ ಸಿಮ್ ಅನ್ನು ಚರಂಡಿಗೆ ಎಸೆದು, ತಮ್ಮ ಮೊಬೈಲ್‌ ಫೋನ್ ಅನ್ನು ನಿಡಿಗಲ್ ನದಿಗೆ ಎಸೆದು, ಚಿಕ್ಕಮಗಳೂರು ಕಡೆಗೆ ಪರಾರಿಯಾದ ಕಾರಣ ಈ ಸ್ಥಳಗಳ ಮಹಜರು ಪ್ರಮುಖವಾಗಿತ್ತು.

ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಿರುವ ಪೊಲೀಸರು, ಅವರ ನಡವಳಿಕೆ ಪತ್ತೆ ಹಚ್ಚಲು ಸ್ಥಳ ಮಹಜರು ಪ್ರಕ್ರಿಯೆ ಮುಂದುವರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಲಕ್ಷಾಂತರ ರೂ. ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಕಲಾಪದ ವೇಳೆ ಮೊಬೈಲ್‌ನಲ್ಲಿ ‘ರಮ್ಮಿ’ ಆಟದಲ್ಲಿ ಮುಳುಗಿದ ಕೃಷಿ ಸಚಿವ

ಮಹಾರಾಷ್ಟ್ರ ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಓರ್ವ ಸಚಿವರು ತಮ್ಮ ಮೊಬೈಲ್ ಫೋನ್‌ನಲ್ಲಿ 'ರಮ್ಮಿ' ಗೇಮ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಆಧಾರ್ ಕಾರ್ಡ್‌ಗೆ ಅವಧಿ ಇದೆಯೇ? ನಿಮ್ಮ ಆಧಾರ್ ಸಿಂಧುತ್ವವನ್ನು ಪರಿಶೀಲಿಸುವುದು ಹೇಗೆ?

ಸಾಮಾನ್ಯವಾಗಿ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್‌ನಂತಹ ಗುರುತಿನ ಚೀಟಿಗಳಿಗೆ ನಿರ್ದಿಷ್ಟ ಅವಧಿ ಇರುತ್ತದೆ. ಆದರೆ, ಬಹುತೇಕರಿಗೆ ಆಧಾರ್ ಕಾರ್ಡ್‌ಗೆ ಎಕ್ಸ್‌ಪೈರಿ ದಿನಾಂಕದ ಬಗ್ಗೆ ಗೊಂದಲವಿದೆ.

ಉಪರಾಷ್ಟ್ರಪತಿ ಧಂಖರ್: ಭಾರತದ ಸಾರ್ವಭೌಮತೆಗೆ ಸವಾಲಿಲ್ಲ, ವಿದೇಶಿ ಹಸ್ತಕ್ಷೇಪ ಅಸಾಧ್ಯ

ಪಾಕಿಸ್ತಾನದೊಂದಿಗಿನ ಭಾರತದ ಸಂಬಂಧಗಳ ಕುರಿತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳ ಹಿನ್ನೆಲೆಯಲ್ಲಿ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ದೇಶದ ಸಾರ್ವಭೌಮತ್ವ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಿಕೆಯ ಬಗ್ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ