spot_img

ಬನ್ನಂಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಯಶಸ್ವಿಯಾಗಿ ನಡೆಯಿತು

Date:

spot_img

ಬನ್ನಂಜೆ: ದಿನಾಂಕ 7 ಜನವರಿ 25 ಮಂಗಳವಾರ ಸಮಯ ಬೆಳಿಗ್ಗೆ 9 :00 ರಿಂದ ಸಂಜೆ 5:00 ರವರೆಗೆ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್(ರಿ) ಮತ್ತು ಉಡುಪಿ ಡಿಸ್ಟ್ರಿಕ್ಟ್ ಸೈನೇಜ್ ಅಸೋಸಿಯೇಷನ್ (ರಿ) ಇವರ ಜಂಟಿ ಸಹಭಾಗಿತ್ವದಲ್ಲಿ ಡಾಕ್-ಸೇವಾ; ಜನ್-ಸೇವಾ-ಅಂಚೆ ಜನ ಸಂಪರ್ಕ ಅಭಿಯಾನದಡಿ ಆಧಾರ್ ನೋಂದಣಿ ಹಾಗು ತಿದ್ದುಪಡಿ ಶಿಬಿರವನ್ನು ಉಡುಪಿ ಅಂಚೆ ಕಛೇರಿಯ ಸಹಾಯಕ ಅಧೀಕ್ಷಕ ಶ್ರೀಯುತ ಕೃಷ್ಣರಾಜ ವಿಠಲಭಟ್ ದೀಪ ಬೆಳಗಿಸುವುದರ ಮುಖೇನ ಉದ್ಘಾಟಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಗೌರವಾಧ್ಯಕ್ಷ ರಾದ ಶ್ರೀಯುತ ದಾಮೋದರ್ ಪೈ ಕುಂದಾಪುರ ರವರು ಕಾರ್ಯಕ್ರಮದ ಆಯೋಜನೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಫ್ಲೆಕ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀಯುತ ದಿನೇಶ್ ಎಂ ಕೆ ಮೂಡಬಿದ್ರೆ ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ ಉಪಸ್ಥಿತರಿದ್ದರು..
ಜಂಟಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ತಮ್ಮ ಹೊಸ ಆಧಾರ್ ನೋಂದಣಿ /ಪರಿಷ್ಕರಣೆ ಹಾಗೂ ಎಲ್ಲಾ ರೀತಿಯ ತಿದ್ದುಪಡಿಗಳ ಲಾಭ ಪಡೆದು, ಅಭಿಯಾನವನ್ನು ಯಶಸ್ವಿಗೊಳಿಸಿದರು.ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಹರೀಶ್ ಕಡೆಕಾರ್, ರಿಜ್ವಾನ್ ಕಟಪಾಡಿ, ಸಂದೀಪ್ ಮಣಿಪಾಲ್, ಸಂತೋಷ್ ಬ್ರಹ್ಮಾವರ್, ರಾಜೇಶ್ ಬೆಳ್ಮಣ್, ಅಮೃತ್ ಸಾಲಿಗ್ರಾಮ, ಮಧುಸೂಧನ್ ಮಲ್ಪೆ, ಲ್ಯಾನ್ಸಿ ಕಲ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಯುತ ಹರೀಶ್ ಅಮೀನ್ ಸಂತೆಕಟ್ಟೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಯವರಾದ ಶ್ರೀಯುತ ಸುನೀಲ್ ಬ್ರಹ್ಮಾವರ ಧನ್ಯವಾದ ತಿಳಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರ್ಗಾನ ಸಂತ ಮರಿಯ ಗೊರೆಟ್ಟಿ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ: ಸದೃಢ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಕರೆ

ಬೈಲೂರು ವಲಯದ ಹಿರ್ಗಾನ ಕಾರ್ಯಕ್ಷೇತ್ರದ ಸಂತ ಮರಿಯ ಗೊರೆಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗಳ ಜಂಟಿ ಆಶ್ರಯದಲ್ಲಿ "ಸ್ವಾಸ್ಥ್ಯ ಸಂಕಲ್ಪ" ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

ಧಾರ್ಮಿಕ ಸೌಹಾರ್ದಕ್ಕೆ ಬೈಲೂರು ಮಾದರಿ: ಭಜನಾ ಪರಿಕರ ವಿತರಣಾ ಸಮಾರಂಭಕ್ಕೆ ಸಿದ್ಧತೆ

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಸಕ್ರಿಯವಾಗಿರುವ ಭಜನಾ ಮಂಡಳಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್, ಭಜನಾ ಮಂಡಳಿಗಳ ಒಕ್ಕೂಟ ಹಾಗೂ ಕರಾವಳಿ ಭಜನಾ ಸಂಸ್ಕಾರ ವೇದಿಕೆ

ಮೈಕ್ರೋಸಾಫ್ಟ್ ಶೇರ್‌ಪಾಯಿಂಟ್‌ಗೆ ಸೈಬರ್ ದಾಳಿ: ರಾಷ್ಟ್ರ-ಪ್ರಾಯೋಜಿತ ಹ್ಯಾಕರ್‌ಗಳಿಂದ ಸೂಕ್ಷ್ಮ ಡೇಟಾ ಸೋರಿಕೆ!

ಮೈಕ್ರೋಸಾಫ್ಟ್‌ನ ಶೇರ್‌ಪಾಯಿಂಟ್ ಪ್ಲಾಟ್‌ಫಾರ್ಮ್ ಮೇಲೆ ಇತ್ತೀಚೆಗೆ ಪ್ರಮುಖ ಭದ್ರತಾ ಘಟನೆಯೊಂದು ಪರಿಣಾಮ ಬೀರಿದೆ.

ಜು.28ರ ‘ಏಕ ವಿನ್ಯಾಸ’ ಸಮಸ್ಯೆ ವಿರುದ್ಧ ಬಿಜೆಪಿ ಪ್ರತಿಭಟನೆ ಯಶಸ್ವಿಗೊಳಿಸಲು ಕುತ್ಯಾರು ಕರೆ

ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು ಪಾಲ್ಗೊಳ್ಳುವ ಈ ಪ್ರತಿಭಟನೆಯನ್ನು ಪಕ್ಷದ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸದ್ರಿ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಸೇರಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.