spot_img

ಗಾಜಾದಲ್ಲಿ 5 ರೂಪಾಯಿಯ ಪಾರ್ಲೆಜಿ ಬಿಸ್ಕತ್ ಬೆಲೆ 2,300 ರೂಪಾಯಿ !

Date:

spot_img

ಇಸ್ರೇಲ್ ಹಾಗೂ ಹಮಾಸ್ ನಡುವಿನ ದ್ವಂಧ್ವದ ಪರಿಣಾಮವಾಗಿ ಸಂಪೂರ್ಣ ನಾಶವಾಗಿರುವ ಗಾಜಾ ಪಟ್ಟಣದಲ್ಲಿ, ಆಹಾರ ಸೇರಿದಂತೆ ಮೂಲಭೂತ ಅಗತ್ಯ ವಸ್ತುಗಳ ಲಭ್ಯತೆ ಕುಸಿದಿದೆ. ಈ ಭೀಕರ ಪರಿಸ್ಥಿತಿಯಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ₹5ಕ್ಕೆ ಲಭ್ಯವಿರುವ ಪಾರ್ಲೆ-ಜಿ ಬಿಸ್ಕತ್ ಗಾಜಾದಲ್ಲಿ ₹2,300ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವ ವರದಿ ವೈರಲ್ ಆಗಿದೆ.

ವೈರಲ್ ಪೋಸ್ಟ್‌ನಲ್ಲಿ, ಗಾಜಾದ ನಿವಾಸಿ ಮೊಹಮ್ಮದ್ ಜವಾದ್ ಎಂಬವರು ಪಾರ್ಲೆ-ಜಿ ಪ್ಯಾಕೆಟ್‌ಗಾಗಿ €24 (ಅಂದಾಜು ₹2,342) ರಷ್ಟು ಹಣವನ್ನು ಪಾವತಿಸಿರುವುದಾಗಿ ತಿಳಿಸಿದ್ದಾರೆ. ಈ ಬಿಸ್ಕತ್‌ಗಳು ಭಾರತ ಸರ್ಕಾರದಿಂದ ಮಾನವೀಯ ಸಹಾಯದ ಭಾಗವಾಗಿ ಉಚಿತವಾಗಿ ಕಳುಹಿಸಲ್ಪಟ್ಟಿದ್ದವು. ಆದರೆ, ಈ ಸಹಾಯ ವಸ್ತುಗಳನ್ನು ಹಮಾಸ್ ಉಗ್ರರು ಗಾಜಾದ ಬಡ ಜನರಿಗೆ ದುಬಾರಿ ದರದಲ್ಲಿ ಮರುಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಹೊರಬಿದ್ದಿವೆ.

2023ರ ಅಕ್ಟೋಬರ್‌ನಲ್ಲಿ ಆರಂಭವಾದ ಯುದ್ಧದಿಂದಾಗಿ ಗಾಜಾದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಾರ್ಚ್ 2 ರಿಂದ ಮೇ 19ರ ನಡುವೆ ಜನತೆ ತೀವ್ರ ಆಹಾರ ಬಿಕ್ಕಟ್ಟನ್ನು ಅನುಭವಿಸಿದ್ದರು. ಅಂತಾರಾಷ್ಟ್ರೀಯ ಒತ್ತಡದ ನಂತರ ಮಾತ್ರ ಕೆಲವು ಸಹಾಯವಾಣಿ ವಾಹನಗಳನ್ನು ಗಾಜಾಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು. ಆದರೆ, ಈ ಸಹಾಯವೂ ಸಾಕಾಗದ ಸ್ಥಿತಿಯಲ್ಲಿದೆ.

ಭಾರತದಿಂದ ಕಳುಹಿಸಲಾದ ಪಾರ್ಲೆ-ಜಿ ಬಿಸ್ಕತ್ ಅನ್ನು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿರುವ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಇದು ಮಾನವೀಯ ಸಹಾಯವನ್ನು ದುರ್ಬಳಕೆ ಮಾಡಿರುವ ಘೋರ ಉದಾಹರಣೆ” ಎಂಬ ಪ್ರತಿಕ್ರಿಯೆ ಕೇಳಿಬರುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ಸು ಫ್ರಮ್‌ ಸೋ” ಅಬ್ಬರ: ಸಣ್ಣ ಬಜೆಟ್, ದೊಡ್ಡ ಕಲೆಕ್ಷನ್ – ಇದು ಕಂಟೆಂಟ್ ತಾಕತ್ತು!

ಇತ್ತೀಚೆಗೆ ತೆರೆ ಬಿದ್ದಿದ್ದು, ಜೆ.ಪಿ. ತುಮಿನಾಡ್ ನಿರ್ದೇಶನದ "ಸು ಫ್ರಮ್‌ ಸೋ" ಚಿತ್ರವು ಅದ್ಭುತ ಗೆಲುವು ಸಾಧಿಸಿದೆ. ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು, ಕಥಾವಸ್ತು ಮತ್ತು ನಿರೂಪಣೆಯ ಶಕ್ತಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಉಡುಪಿಯಲ್ಲಿ ವರುಣನ ಆರ್ಭಟ: ಆಸ್ತಿಪಾಸ್ತಿಗೆ ಹಾನಿ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ 24 ಗಂಟೆಗಳಿಂದ ಬಿಡದೇ ಸುರಿಯುತ್ತಿರುವ ಭಾರೀ ಗಾಳಿ ಮತ್ತು ಮಳೆಯು ವ್ಯಾಪಕ ಅವಾಂತರಗಳನ್ನು ಸೃಷ್ಟಿಸಿದ್ದು, ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ

ಹರಿದ್ವಾರದಲ್ಲಿ ದುರಂತ: ಮಾನಸಾ ದೇವಿ ದೇವಾಲಯದಲ್ಲಿ ಕಾಲ್ತುಳಿತ, 7 ಮಂದಿ ಸಾವು, ಹಲವರಿಗೆ ಗಾಯ

ಉತ್ತರಾಖಂಡದ ಪುಣ್ಯಕ್ಷೇತ್ರ ಹರಿದ್ವಾರದಲ್ಲಿರುವ ಪ್ರಸಿದ್ಧ ಮಾನಸಾ ದೇವಿ ದೇವಾಲಯದಲ್ಲಿ ಭಾನುವಾರ (ಜುಲೈ 27) ಸಂಭವಿಸಿದ ದುರದೃಷ್ಟಕರ ಕಾಲ್ತುಳಿತದಲ್ಲಿ ಏಳು ಭಕ್ತರು ಪ್ರಾಣ ಕಳೆದುಕೊಂಡಿದ್ದು, 28ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ

ರಾಜ್ಯದ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್: ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ, ಸಂಚಾರ ಸ್ಥಗಿತ

ರಾಜ್ಯದಾದ್ಯಂತ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ