
ಓಂ ಶ್ರೀ ಮಂಜುನಾಥಾಯ ನಮಃ
ಅಹಿಂಸ ಅನಿಮಲ್ ಟ್ರಸ್ಟ್ ಬಜಗೋಳಿ ಇಲ್ಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂಪಾಯಿ ಎರಡು ಲಕ್ಷದ ಮೊತ್ತದ ಅನುದಾನವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಹೇಮಲತಾರವರು ಅನಿಮಲ್ ಟ್ರಸ್ಟ್ ನ ವೀರಾಂಜಯ ಹೆಗ್ಡೆಯವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ತಾಲೂಕು ಸದಸ್ಯರಾದ ಮಹಾವೀರ ಜೈನ್, ಹರಿಶ್ಚಂದ್ರ ತೆಂಡೂಲ್ಕರ್, ಕೃಷ್ಣ ಶೆಟ್ಟಿ, ಪದ್ಮಪ್ರಸಾದ್ ಜೈನ್, ವಲಯದ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ, ಶೌರ್ಯ ಘಟಕದ ನವೀನ್, ವಲಯದ ಮೇಲ್ವಿಚಾರಕರಾದ ಶಾರದಾ ರೈ , ಸೇವಾ ಪ್ರತಿನಿಧಿ ಸುಮಿತ್ರ ಇನ್ನಿತರರು ಉಪಸ್ಥಿತರಿದ್ದರು.