
ಇನ್ನಂಜೆ: ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆ ಇನ್ನಂಜೆ ಇಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಶ್ರೀ ವಿಶ್ವನಾಥ ನಾಯ್ಕ ಪೇತ್ರಿ ಅವರಿಗೆ ಸಂಸ್ಥೆಯ ವತಿಯಿಂದ ಅರ್ಥಪೂರ್ಣ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಧಾಕೃಷ್ಣ ಎಸ್. ಐತಾಳ್ ಅವರು ಸನ್ಮಾನಿತರಾದ ವಿಶ್ವನಾಥ ನಾಯ್ಕ ಪೇತ್ರಿ ಅವರ ವೃತ್ತಿ ಜೀವನ ಮತ್ತು ಕೊಡುಗೆಗಳನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನಿವೃತ್ತರನ್ನು ಸನ್ಮಾನಿಸಿ, “ಶಿಕ್ಷಕ ವೃತ್ತಿ ಶ್ರೇಷ್ಠವಾದುದು. 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ವಿಶ್ವನಾಥ ನಾಯ್ಕ ಅವರ ನಿವೃತ್ತ ಜೀವನ ಸುಖಕರವಾಗಲಿ” ಎಂದು ಶುಭ ಹಾರೈಸಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ರತ್ನ ಕುಮಾರ್ ಅವರು ವಿಶ್ವನಾಥ ನಾಯ್ಕ ಅವರ ಸೇವೆಯನ್ನು ಸ್ಮರಿಸಿ, ಶುಭಾಶಯ ಕೋರಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲಿನಿ ಶೆಟ್ಟಿ, ಉದ್ಯಮಿ ನವೀನ್ ಅಮಿನ್, ಎಸ್.ವಿ.ಎಸ್. ಆಂಗ್ಲ ಮಾಧ್ಯಮದ ಆಡಳಿತಾಧಿಕಾರಿ ಪ್ರಭಾವತಿ ಎಸ್. ಅಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷ ಮಧುಸೂದನ್ ಆಚಾರ್ಯ, ಯುವತಿ ಮಂಡಲದ ಕಾರ್ಯದರ್ಶಿ ಪ್ರಭಾವತಿ ಆಚಾರ್ಯ, ಇನ್ನಂಜೆ ಸಾಮಾಜಿಕ ಸೇವಾ ಸಮಿತಿಯ ಅಧ್ಯಕ್ಷರಾದ ರವಿವರ್ಮ ಶೆಟ್ಟಿ, ಇನ್ನಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ರಾಜೇಂದ್ರ ಪ್ರಭು ಸನ್ಮಾನ ಪತ್ರವನ್ನು ವಾಚಿಸಿದರು. ಪ್ರಭಾಕರ ಭಟ್ ಅವರು ವಿಶ್ವನಾಥ ನಾಯ್ಕ ಅವರನ್ನು ಪರಿಚಯಿಸಿದರು. ಹಳೆಯ ವಿದ್ಯಾರ್ಥಿನಿ ಶಶಿಕಲಾ ಆಚಾರ್ಯ ನಿವೃತ್ತರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಾಯ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ಧನ್ಯವಾದವಿತ್ತರು. ಅನಿತಾ ಮಥಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು.