spot_img

ಮಂಗಳೂರು ಅಪಾರ್ಟ್‌ಮೆಂಟ್ ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ

Date:

spot_img

ಮಂಗಳೂರು : ಮಂಗಳೂರು ಕುತ್ತಾರಿನ ಸಿಲಕೋನಿಯಾ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಕೆಳಗೆ ಬಿದ್ದು, 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿ ಹಿಬಾ ಐಮನ್ (15), ಯೆನಪೋಯಾ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಹಿಬಾ, ಯೆನಪೋಯಾ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಮಮ್ತಾಝ್ ಅಹ್ಮದ್ ಹಾಗೂ ಡಾ. ಕಮ್ರಾಜ್ ದಂಪತಿಯ ಪುತ್ರಿಯಾಗಿದ್ದಳು.

ಘಟನೆ ನಡೆದ ಸಮಯದಲ್ಲಿ, ವೈದ್ಯ ದಂಪತಿಗಳು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕರ್ತವ್ಯದಲ್ಲಿದ್ದರು. ಮನೆಯಲ್ಲೊಬ್ಬಳೇ ಇದ್ದ ಹಿಬಾ, ಬಾಲ್ಕನಿಯಲ್ಲಿ ಬೆಡ್‌ಶೀಟ್ ಒಣಗಿಸಲು ಸ್ಟೂಲ್ ಹತ್ತುವ ಯತ್ನದಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ.ಈಕೆ ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾಳೆ .

ಘಟನೆ ನಂತರ ತಕ್ಷಣವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೂದಲಿನ ಆರೋಗ್ಯಕ್ಕೆ ಕರಿಬೇವು ಮತ್ತು ಕೊಬ್ಬರಿ ಎಣ್ಣೆಯ ಮ್ಯಾಜಿಕ್: ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಬೆರೆಸಿ ಬಳಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಮತ್ತು ಕೂದಲು ದಟ್ಟವಾಗಿ, ಕಪ್ಪಾಗಿ, ವೇಗವಾಗಿ ಬೆಳೆಯುತ್ತದೆ.

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಮೂವರು ಆರೋಪಿಗಳ ಬಂಧನ

ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸೌಜನ್ಯಾ ಸಹಿತ ಧರ್ಮಸ್ಥಳ ಪ್ರಕರಣಗಳ ನ್ಯಾಯಕ್ಕಾಗಿ ಆಗ್ರಹ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಐಡಿಎಸ್‌ಒ ಪ್ರತಿಭಟನೆ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಅಪರಾಧ ಪ್ರಕರಣಗಳ ಸಮರ್ಪಕ ತನಿಖೆ ಮತ್ತು ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಧರಣಿ ಹಮ್ಮಿಕೊಂಡಿತ್ತು.

ಹಿರಿಯಡಕ ಬ್ರಾಹ್ಮಣ ಮಹಾಸಭಾದಿಂದ ‘ಆಟಿ ಸಂಭ್ರಮ 2025’

ಬ್ರಾಹ್ಮಣ ಮಹಾಸಭಾ, ಹಿರಿಯಡಕ ಇವರ ವತಿಯಿಂದ ಆಗಸ್ಟ್ 3, 2025 ಭಾನುವಾರದಂದು ಬೆಳಗ್ಗೆ 9 ಗಂಟೆಗೆ ಓಂತಿಬೆಟ್ಟುವಿನ ಶ್ರೀ ಲಕ್ಷ್ಮೀಕೃಪಾ ಕಲ್ಯಾಣಮಂಟಪದಲ್ಲಿ 'ಆಟಿ ಸಂಭ್ರಮ 2025' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.