
ಉಡುಪಿ, ಏಪ್ರಿಲ್ 2: ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ವಿಶ್ವಗೀತಾ ಪರ್ಯಾಯದ ಅಂಗವಾಗಿ 749 ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, 31.3.25 ರಂದು 750ನೇ ಕಾರ್ಯಕ್ರಮ ರಾಜಾಂಗಣದಲ್ಲಿ ಜರುಗಿತು.
ಈ ವಿಶೇಷ ಸಂದರ್ಭದಲ್ಲಿ ಬೆಂಗಳೂರು ನಟೇಶ ನೃತ್ಯಾಲಯದ ಶ್ರೀಮತಿ ನಯನಾ ಅನಂದನ್ ಮತ್ತು ಬಳಗ ಅವರು “ಶ್ರೀಕೃಷ್ಣ” ನೃತ್ಯ ನಾಟಕ ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.
ಶ್ರೀ ಕೃಷ್ಣ ಮತ್ತು ಮುಖ್ಯಪ್ರಾಣರ ಸಾನ್ನಿಧ್ಯದಲ್ಲಿ ಕಲಾ ಸೇವೆ ಸಲ್ಲಿಸುವುದರಿಂದ ಕಲಾವಿದರ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಶ್ರೀಗಳು ಆಶೀರ್ವದಿಸಿದರು. ಎಲ್ಲ ಕಲಾವಿದರಿಗೆ “ಕೋಟಿ ಗೀತಾ ದೀಕ್ಷೆ” ಯೊಂದಿಗೆ ಅನುಗ್ರಹಿಸಿದರು.