
ಉಡುಪಿ : ಉಡುಪಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. 6ನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕನೋರ್ವ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾನೆ.
ಮೃತ ಬಾಲಕನನ್ನು ಉಡುಪಿಯ ಖಾಸಗಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ರ‍್ಯಾಂನ್ಸ್ ಕ್ಯಾಥಲ್ ಡಿ’ಸೋಜಾ (11) ಎಂದು ಗುರುತಿಸಲಾಗಿದೆ. ಜುಲೈ 15ರ ಮಂಗಳವಾರ ಬೆಳಿಗ್ಗೆ, ರ‍್ಯಾಂನ್ಸ್ ತನ್ನ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಆತ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಬಾಲಕನ ಅನಿರೀಕ್ಷಿತ ಸಾವಿಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಈ ದುರ್ಘಟನೆ ಕುಟುಂಬದಲ್ಲಿ ಮತ್ತು ಶಾಲೆಯಲ್ಲಿ ಆಘಾತ ಮೂಡಿಸಿದೆ.