
ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂಬ ಮಾತು ಕೇವಲ ನುಡಿಮಾತಲ್ಲ, ಅದನ್ನು ಜೀವನದಲ್ಲಿ ಅಳವಡಿಸಿದ ಉದಾಹರಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 50 ವರ್ಷದ ಮಹಿಳೆಯೊಬ್ಬರು ತಮಗಿಂತ 28 ವರ್ಷ ಕಿರಿಯನಾದ 22ರ ಯುವಕನನ್ನು ದೇವಾಲಯದಲ್ಲಿ ವಿವಾಹವಾಗಿರುವ ಘಟನೆ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಈ ವಿಚಿತ್ರ ಮದುವೆಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕವಾಗಿ ಹರಡಿದ್ದು, ಅದರಲ್ಲಿ ಇಬ್ಬರೂ ದೇವಾಲಯದ ಮುಂದೆ ನಿಂತು ಪರಸ್ಪರ ಹಾರ ಬದಲಾಯಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಮದುವೆಯಾದ ಖುಷಿಯು ಮಹಿಳೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ತಲೆಯ ಮೇಲೆ ಕುಂಕುಮ, ಸಂತೋಷದಿಂದ ಮಂದಹಾಸ ಗೋಚರಿಸುತ್ತಿದೆ.
ವಿಡಿಯೋದಲ್ಲಿ ಸಂದರ್ಶಕನೊಬ್ಬ “ನಿಮ್ಮಿಬ್ಬರ ವಯಸ್ಸೆಷ್ಟು?” ಎಂದು ಕೇಳಿದಾಗ, ಮಹಿಳೆ ಯಾವುದೇ ಮುಜುಗುರವಿಲ್ಲದೆ ಧೈರ್ಯವಾಗಿ “ನನಗೆ 50, ಇವನಿಗೆ 22” ಎಂದು ನಗುತ್ತಲೇ ಉತ್ತರಿಸುತ್ತಾರೆ. ತಾವು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಪ್ರೀತಿಗೆ ವಯಸ್ಸಿನ ಬೇಧವಿಲ್ಲ, ಜಾತಿ ಧರ್ಮದ ಗಡಿ ಇಲ್ಲ. ಮನಸ್ಸುಗಳು ಒಂದಾದರೆ ಸಾಕು, ಮದುವೆ ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ವಿಡಿಯೋ ಈಗ ಜನಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೇಮ ಜೋಡಿಯ ಧೈರ್ಯದ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗುತ್ತಿದೆ. ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಇವರ ಈ ನಿರ್ಧಾರವನ್ನು ಗೌರವಿಸುತ್ತಿದ್ದಾರೆ.