
ವಿಜ್ಞಾನ ವಿಭಾಗ : ಆಸ್ತಿ ಎಸ್ ರಾಜ್ಯಕ್ಕೆ 4 ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ
ವಾಣಿಜ್ಯ ವಿಭಾಗ : ಸಹನಾ ಮತ್ತು ತನ್ವಿ ರಾಜ್ಯಕ್ಕೆ6 ನೇ ಹಾಗೂ ಜಿಲ್ಲೆಗೆ 2 ನೇ ಸ್ಥಾನ
ಜ್ಞಾನಸುಧಾದ 722 ವಿಶಿಷ್ಟ ಶ್ರೇಣಿ
ಗಣಿತನಗರ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 29 ವಿದ್ಯಾರ್ಥಿಗಳು 10ರೊಳಗಿನ ರ‍್ಯಾಂಕ್ ಪಡೆದಿದ್ದು, ಕಾರ್ಕಳ ಜ್ಞಾನಸುಧಾದ ವಿಜ್ಞಾನ ವಿಭಾಗದ ಆಸ್ತಿ ಎಸ್ 596 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು, ಶ್ರೀ ರಕ್ಷಾ ಆರ್ ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ ಕುಮಾರ್ 595 ಅಂಕಗಳೊಂದಿಗೆ ರಾಜ್ಯಕ್ಕೆ ಐದನೇ ಸ್ಥಾನಿಯಾಗಿ ಹಾಗೂ ಜಿಲ್ಲೆಗೆ 2ನೇ ಸ್ಥಾನವನ್ನು ಪಡೆದಿರುತ್ತಾರೆ.
ಕಾರ್ಕಳ ಜ್ಞಾನಸುಧಾದ ಮಯೂರ್ ಗೌಡ, ಭಾರ್ಗವ್ ಎಚ್ ನಾಯಕ್, ವಿಷ್ಣು ಜಿ ನಾಯಕ್ ಹಾಗೂ ಶ್ರಾವ್ಯ ವಾಗ್ಲೆ 594 ಅಂಕಗಳನ್ನು, ಹರ್ಷಿತ್ ಆರ್ ಎಚ್, ಅನ್ವಿತಾ ನಾಯಕ್, ವಿಶ್ವ ಆರ್ ನಾಯಕ್ ಹಾಗೂ ಉಡುಪಿ ಜ್ಞಾನಸುಧಾದ ಸ್ನೇಹ ಎ ಕಾಮತ್ 593 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಉತ್ಸವ್ ಸಿ ಪಾಟೀಲ್, ಸಂಜನಾ ಶೆಣೈ ಮತ್ತು ಉಡುಪಿ ಜ್ಞಾನಸುಧಾದ ರಚಿತ್ ಜೆ.ಬಿ ಹಾಗೂ ಸೃಷ್ಟಿ 592 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಸರ್ವಜಿತ್ ಕೆ.ಆರ್, ಧನ್ಯಶ್ರೀ ಆರ್ 591 ಅಂಕವನ್ನು, ಕಾರ್ಕಳ ಜ್ಞಾನಸುಧಾದ ಅನುಷ್ಕಾ ಜಿ, ಪ್ರಣವ್ ಎನ್.ಎಂ, ಶ್ರೇಯಸ್ ಕೆ, ಅನ್ವಿತಾ ಆರ್ ಕಾಮತ್, ಸುಕೃತಿ ಜಿ. ಝೋಷಿ, ತನೀಷಾ ಶೆಟ್ಟಿ ಹಾಗೂ ಉಡುಪಿ ಜ್ಞಾನಸುಧಾದ ಶ್ರೀಹರಿ ಎಸ್.ಜಿ 590 ಅಂಕವನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗ : ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಹನಾ ನಾಯಕ್ ಹಾಗೂ ತನ್ವಿ ರಾವ್ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 2ನೇ ಸ್ಥಾನಿಯಾಗಿ, ರಕ್ಷಾ ರಾಮಚಂದ್ರ 592 ಅಂಕ ಗಳಿಸಿ ರಾಜ್ಯಕ್ಕೆ 9ನೇ ಹಾಗೂ ಜಿಲ್ಲೆಗೆ 5ನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳಾದ ವಿ. ಯಶಸ್ವಿ ನಾಯ್ಕ್ (591 ಅಂಕ) ಸಚಿನ್ ಸುರೇಶ್ ಶೆಣೈ(589 ಅಂಕ) ಹಾಗೂ ಖತಿಜಾತುಲ್ ರಫಿಯಾ(588 ಅಂಕ) ಗಳಿಸಿದ್ದು ಪರೀಕ್ಷೆ ಬರೆದ 49 ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು 88ಕ್ಕಿಂತ ಆಧಿಕ ಪರ್ಸಂಟೇಜ್ ಗಳಿಸಿದ್ದಾರೆ.
ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 521 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 486 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 49ರಲ್ಲಿ 45 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 4 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿ ಜ್ಞಾನಸುಧಾದ ವಿಜ್ಞಾನ ವಿಭಾಗದಲ್ಲಿ 213 ವಿದ್ಯಾರ್ಥಿಗಳಲ್ಲಿ 191 ವಿಶಿಷ್ಟ ಶ್ರೇಣಿಯಲ್ಲಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಕಾಲೇಜಿನ 29 ವಿದ್ಯಾರ್ಥಿಗಳು ಮೊದಲ ಹತ್ತು ರ‍್ಯಾಂಕ್ ಪಡೆದಿದ್ದು, 722 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ದಾಖಲೆಯ ಫಲಿತಾಂಶ ಪಡೆದಿದ್ದಲ್ಲದೇ, ವಿಷಯವಾರು ಪೂರ್ಣಾಂಕದಲ್ಲಿ ಗಣಿತಶಾಸ್ತ್ರ 144, ಜೀವಶಾಸ್ತ್ರದಲ್ಲಿ 113, ರಸಾಯನಶಾಸ್ತ್ರ- 48, ಭೌತಶಾಸ್ತ್ರ -27, ಸಂಖ್ಯಾಶಾಸ್ತ್ರ -20, ಗಣಕಶಾಸ್ತ್ರ -37, ಮೂಲಗಣಿತ-2, ಲೆಕ್ಕಶಾಸ್ತ್ರ -7, ವ್ಯವಹಾರ ಅಧ್ಯಯನದಲ್ಲಿ- 21, ಸಂಸ್ಕೃತ-113 ಮತ್ತು ಕನ್ನಡ-4 ಸೇರಿದಂತೆ 536 ವಿಷಯವಾರು ಪೂರ್ಣಂಕ ಬಂದಿರುತ್ತದೆ.
ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.