ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ‘ಕ್ರೋಮಿಂಗ್’ ಸವಾಲಿಗೆ ಬಲಿಯಾದ 19 ವರ್ಷದ ಯುವತಿ

Date:

spot_img

ಅರಿಜೋನಾ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಕ್ರೋಮಿಂಗ್’ ಅಥವಾ ‘ಧೂಳು ತೆಗೆಯುವ ಸವಾಲು’ (Dusting Challenge) ಪ್ರಾಣಪಾಯದ ಆಟವಾಗಿ ತಿರುಗಿದ್ದು, 19 ವರ್ಷದ ಯುವತಿ ರೇನಾ ಒ’ರೂರ್ಕ್ ಈ ಸವಾಲಿಗೆ ಬಲಿಯಾದ ದುರ್ಘಟನೆ ನಡೆದಿದೆ.

ರೆನಾ ತನ್ನ ತಂದೆಗೆ ಸದಾ “ಅಪ್ಪಾ, ನಾನು ಫೇಮಸ್ ಆಗ್ತೀನಿ. ನೀವು ನೋಡಿ ಹೆಮ್ಮೆ ಪಡ್ತೀರಾ” ಎಂದು ಹೇಳುತ್ತಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲಿ ತಾನು ಪ್ರಸಿದ್ಧಳಾಗಬೇಕೆಂಬ ಕನಸಿನಲ್ಲಿ, ಆಕೆ ಕ್ರೋಮಿಂಗ್ ಎಂಬ ಅಪಾಯಕಾರಿ ಟ್ರೆಂಡ್‌ನ್ನು ಅನುಸರಿಸಿದ್ದಳು.

ಕ್ರೋಮಿಂಗ್ ಅಂದರೆ ಏನು?
ಕ್ರೋಮಿಂಗ್ ಎಂದರೆ ಏರೋಸಾಲ್ ಅಥವಾ ಇತರೆ ಕ್ಲೀನಿಂಗ್ ಸ್ಪ್ರೇಗಳನ್ನ ಉಸಿರಾಡುವುದು. ಇದರಿಂದ ತಾತ್ಕಾಲಿಕ ಉಲ್ಲಾಸ ಅಥವಾ ‘ಹೈ’ ಭಾವನೆ ಬರುತ್ತದೆ ಎಂಬ ನಂಬಿಕೆಯಿದೆ. ಆದರೆ ವೈದ್ಯಕೀಯವಾಗಿ ಇದು ಅತ್ಯಂತ ಮಾರಕ. ಕೆಮಿಕಲ್‌ನ ಪರಿಣಾಮದಿಂದ ತಕ್ಷಣದ ಹೃದಯಾಘಾತ, ಮೂಳೆಯ ಹಾನಿ, ಅಥವಾ ಉಸಿರಾಟದ ತೊಂದರೆ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಘಟನೆಯ ವಿವರ:
ರೆನಾ ಮತ್ತು ಆಕೆಯ ಗೆಳೆಯನು ಎಸ್ರೋಸಾಲ್ ಕೀಬೋರ್ಡ್ ಕ್ಲೀನರ್ ಅನ್ನು ಆರ್ಡರ್ ಮಾಡಿ, ಕ್ರೋಮಿಂಗ್ ಪ್ರಯತ್ನಿಸಿದ್ದರು. ಈ ಕ್ರಿಯೆಯ ನಂತರ ರೇನಾಳಿಗೆ ತಕ್ಷಣವೇ ಹೃದಯಾಘಾತ ಸಂಭವಿಸಿದ್ದು, ಐಸಿಯುನಲ್ಲಿ ಒಂದು ವಾರ ಪ್ರಜ್ಞಾಹೀನವಾಗಿ ಉಳಿದು, ಕೊನೆಗೆ ಬ್ರೈನ್ ಡೆಡ್ ಎಂದು ಘೋಷಿಸಲಾಯಿತು.

ಆಕೆಯ ತಂದೆ ಆರನ್ ಒ’ರೂರ್ಕ್ ರವರು “ಅವಳು ಫೇಮಸ್ ಆಗಲಿಚ್ಚಿಸಿದ್ದಳು. ಆದರೆ ದುರದೃಷ್ಟವಶಾತ್, ಇಂದು ಆಕೆಯೇ ಇಲ್ಲ” ಎಂದು ಆಕ್ರಂದಿಸಿದ್ದಾರೆ. ಇಂತಹ ಟ್ರೆಂಡ್ಗಳ ಅಪಾಯವನ್ನು ತೀವ್ರವಾಗಿ ಅರಿತುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ತಜ್ಞರ ಎಚ್ಚರಿಕೆ:
ಕ್ರೋಮಿಂಗ್ ಅಥವಾ ಧೂಳು ತೆಗೆಯುವ ಸವಾಲು ಯುವಜನರಲ್ಲಿ ಬೆಳೆದಿರುವ ಅಪಾಯಕಾರಿಯಾದ ಪ್ರವೃತ್ತಿ. ಮನೆಯಲ್ಲೇ ಲಭ್ಯವಿರುವ ಸಾಮಾನ್ಯ ಕ್ಲೀನಿಂಗ್ ಉತ್ಪನ್ನಗಳನ್ನು ದುರುಪಯೋಗಿಸುವುದು ಜೀವಕ್ಕೆ ಮಾರಕವಾಗಬಹುದು. ಈ ಕುರಿತಾಗಿ ಪೋಷಕರು ಮತ್ತು ಯುವಜನತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ