ಒಂದೇ ಓವರ್​ನಲ್ಲಿ 18 ರನ್… ಬುಮ್ರಾಗೆ ಯದ್ವ ತದ್ವ ಚಚ್ಚಿದ ಸ್ಯಾಮ್ ಕೊನ್​ಸ್ಟಾಸ್

Date:

spot_img

Australia vs India, 4th Test: ಮೆಲ್ಬೋರ್ನ್​ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂಲಕ ಸ್ಯಾಮ್ ಕೊನ್​ಸ್ಟಾಸ್ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದಾರೆ. ಅದು ಸಹ ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ. ಅದರಲ್ಲೂ ಬುಮ್ರಾ ಅವರ ಒಂದೇ ಓವರ್​ನಲ್ಲಿ 18 ರನ್​ ಚಚ್ಚುವ ಮೂಲಕ ಸ್ಯಾಮ್ ಇದೀಗ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ಮೆಲ್ಬೋರ್ನ್​​ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಯುವ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದು ಸಹ ಯಾರ್ಕರ್ ಸ್ಪೆಷಲಿಸ್ಟ್ ಖ್ಯಾತಿಯ ವಿಶ್ವದ ನಂಬರ್ 1 ಬೌಲರ್ ಜಸ್​ಪ್ರೀತ್ ಬುಮ್ರಾ ಅವರನ್ನು ಟಾರ್ಗೆಟ್ ಮಾಡುವ ಮೂಲಕ ಎಂಬುದು ವಿಶೇಷ. ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸ್ಯಾಮ್ ಕೊನ್​ಸ್ಟಾಸ್ ಆರಂಭದಲ್ಲೇ ಭಾರತೀಯ ಬೌಲರ್​ಗಳ ಬೆಂಡೆತ್ತಿದರು. ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಟೆಸ್ಟ್ ಕೆರಿಯರ್ ಶುರು ಮಾಡಿದ ಸ್ಯಾಮ್ ಕೊನ್​ಸ್ಟಾಸ್ ಕೆಲವೇ ಕ್ಷಣಗಳಲ್ಲಿ ತಂಡದ ಸ್ಕೋರ್​​ ಅನ್ನು 50ರ ಗಡಿದಾಟಿಸಿದರು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಎಸೆದ 11ನೇ ಓವರ್​​ನಲ್ಲಿ ಸ್ಯಾಮ್ ಬರೋಬ್ಬರಿ 18 ರನ್​ಚಚ್ಚಿದ್ದರು.

ಬುಮ್ರಾ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್ ಕೊನ್​ಸ್ಟಾಸ್ ಫೋರ್ ಬಾರಿಸಿದರು. ದ್ವಿತೀಯ ಎಸೆತದಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ. ಮೂರನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ನಾಲ್ಕನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದರು. ಐದನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು. ಇನ್ನು ಆರನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ ಸ್ಯಾಮ್ ಕೊನ್​ಸ್ಟಾಸ್ 18 ರನ್​​ಗಳಿಸಿ ಅಬ್ಬರಿಸಿದರು.

ಅಬ್ಬರದೊಂದಿಗೆ ಸ್ಯಾಮ್ ಕೊನ್​ಸ್ಟಾಸ್ ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಂಟ್ರೆಸ್ಟಿಂಗ್ ವಿಷಯ ಎಂದರೆ ಸ್ಯಾಮ್ ಅರ್ಧಶತಕ ಪೂರೈಸುವಾಗ ಆಸ್ಟ್ರೇಲಿಯಾ ತಂಡದ ಸ್ಕೋರ್ 73 ರನ್​ಗಳು. ಅದರಲ್ಲಿ 52 ರನ್​ಗಳನ್ನು ಯುವ ದಾಂಡಿಗನೇ ಕಲೆಹಾಕಿದ್ದರು.

ಮೂಲಕ ಮೊದಲ ಪಂದ್ಯದಲ್ಲಿ ಎದುರಿಸಿದ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 60 ರನ್​ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ 19 ವರ್ಷದ ಸ್ಯಾಮ್ ಕೊನ್​ಸ್ಟಾಸ್ ಸ್ಪೋಟಕ ಇನಿಂಗ್ಸ್​ನೊಂದಿಗೆ ತಮ್ಮ ಟೆಸ್ಟ್ ಕೆರಿಯರ್ ಆರಂಭಿಸಿದ್ದು ವಿಶೇಷ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ