
ಬೈಲೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು ಬೈಲೂರು ವಲಯದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಯರ್ಲಪಾಡಿ ಬೈಲೂರು ಇದರ ಆಶ್ರಯದಲ್ಲಿ ನಡೆಯುವ 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೌಡೂರು ಮಾರಿಯಮ್ಮ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಆದ್ಯಕ್ಷತೆಯನ್ನು ಶ್ರೀಮತಿ ವಿಮಲ ಶಂಕರ ಪೂಜಾರಿ ವಹಿಸಿದರು. ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನವನ್ನು ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸೀಮಾ ಕಾಮತ್ ,ಪ್ರಾಧ್ಯಾಪಕಿ ಭುವನೇಂದ್ರ ಶಾಲೆ ಕಾರ್ಕಳ ಇವರು ಮಾತನಾಡುತ್ತಾ ವರಮಹಾಲಕ್ಷ್ಮಿ ಪೂಜೆಯನ್ನು ಮಾಡುವ ವಿಧಿ ವಿಧಾನ ಇದರಿಂದ ಸಂಸ್ಕೃತಿ – ಸಂಸ್ಕಾರ , ಅಳಿವು – ಉಳಿವಿಕೆ ಬಗ್ಗೆ ಪ್ರವಚನ ನೀಡಿದರು.

ಶ್ರೀ.ಕ್ಷೇ.ಧ.ಗ್ರಾ ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು ಇದರ ಕೇಂದ್ರ ಸಮಿತಿ ಅಧ್ಯಕ್ಷರಾದ ಮಂಜುನಾಥ ಬೈಲೂರು , ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ (ರಿ) ಕಾರ್ಕಳ ತಾಲೂಕು ಯೋಜನಾಧಿಕಾರಿಯವರಾದ ಬಾಲಕೃಷ್ಣ ಹಿರಿಂಜ , ಜಿಲ್ಲಾ ಜನಜಾಗ್ರತಿ ಸಮಿತಿ ಸದಸ್ಯರಾದ ಕಮಲಾಕ್ಷ ನಾಯಕ್ ಜಾರ್ಕಳ ಮತ್ತು ವಲಯದ ಮೇಲ್ವಿಚಾರಕರಾದ ಯಶೋಧ, ಜಿಲ್ಲಾ ಜನಜಾಗೃತಿ ಸದಸ್ಯರಾದ ತಾರಾನಾಥ್ ಶೆಟ್ಟಿ ಗೋವಿಂದೂರು ,ಯರ್ಲಪಾಡಿ ಒಕ್ಕೂಟದ ಅಧ್ಯಕ್ಷರಾದ ವಿಜೇಶ್ ಪೂಜಾರಿ ಮತ್ತು ಕಾಂತರಗೋಳಿ ಒಕ್ಕೂಟದ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ ಯರ್ಲಪಾಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ನಿಕಟಪೂರ್ವ ವಲಯಧ್ಯಕ್ಷರಾದ ಕೆ ಧರ್ಮರಾಜ್ ಕುಮಾರ್ ರವರು ನೆರವೇರಿಸಿದರು. ಶ್ರೀನಿವಾಸ್ ಪೂಜಾರಿ ಯರ್ಲಪಾಡಿ ಇವರು ಸ್ವಾಗತಿಸಿ ಪ್ರಾಸ್ತಮಿಕ ನುಡಿಗಳನ್ನಾಡಿದರು ಮತ್ತು ವಿಜೇಶ್ ಪೂಜಾರಿ ಗೋವಿಂದೂರು ಇವರು ಧನ್ಯವಾದ ನೀಡಿದರು. ಕಾರ್ಯಕ್ರಮದಲ್ಲಿ ವಲಯದ ಸೇವಾ ಪ್ರತಿನಿಧಿಗಳು , ಒಕ್ಕೂಟದ ಪದಾಧಿಕಾರಿಗಳು , ಊರ ಗಣ್ಯರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.