
ಹೊಸದಿಲ್ಲಿ: ಪಹಲ್ಗಾಮ್ ಉಗ್ರ ದಾಳಿಯಲ್ಲಿ 15 ಕಾಶ್ಮೀರದ ಸ್ಥಳೀಯರು ನೆರವಾಯಿತು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಎಲೆಕ್ಟ್ರಾನಿಕ್ ಕಣ್ಣಾವಲಿಯ ಆಧಾರದಲ್ಲಿ ಈ ಶಂಕಿತರನ್ನು ಗುರುತಿಸಲಾಗಿದ್ದು, ಪಾಕಿಸ್ಥಾನದಿಂದ ಶಸ್ತ್ರಾಸ್ತ್ರ ಸಾಗಾಣಿಕೆ ಹಾಗೂ ಸರಕು ಸಾಗಾಟಕ್ಕೆ ಸಹಾಯ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶಂಕಿತರೆಲ್ಲರೂ ದಕ್ಷಿಣ ಕಾಶ್ಮೀರ ಪ್ರದೇಶದವರಾಗಿದ್ದು, ತನಿಖಾ ಸಂಸ್ಥೆಗಳು ಐದು ಮಂದಿ ಶಂಕಿತರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದವು. ಇದರಲ್ಲಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಾಳಿಯ ದಿನದಂದು ಈ ಶಂಕಿತರು ಪಹಲ್ಲಾಮ್ ಪ್ರದೇಶದಲ್ಲಿಯೇ ಇದ್ದಿದ್ದು, ಪರಸ್ಪರ ಕರೆಮಾಡಿ ಸಂಚುಕೂಟ ನಡೆಸಿದ ಶಂಕೆ ಇದೆ. ಎನ್‌ಐಎ ಹಾಗೂ ರಾಜ್ಯ ಪೊಲೀಸರ ಸಂಯುಕ್ತ ತನಿಖಾ ತಂಡ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುತ್ತಿದೆ.