
ಪ್ರತಿಯೊಬ್ಬ ಕನ್ನಡಿಗರು ಕೂಡ ವ್ಯಾಸರಾಯರನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ ಸಂಸ್ಕೃತ ಸಾಹಿತ್ಯವನ್ನು ಕನ್ನಡದಲ್ಲಿ ಹಾಡಿನ ಮೂಲಕ ಒದಗಿಸಿಕೊಟ್ಟ ಕೀರ್ತಿ ಮೊದಲಿಗೆ ವ್ಯಾಸರಾಯರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ವಿದ್ಯಾರಣ್ಯರಿಂದ ಸ್ಥಾಪಿಸಲ್ಪಟ್ಟ ಹಂಪೆಯ ದಿವ್ಯ ಸಿಂಹಾಸನವನ್ನು ಕೃಷ್ಣದೇವರಾಯನ ಕಾಲದಲ್ಲಿ ರಕ್ಷಿಸಿ, ಉಳಿಸಿ, ಬೆಳೆಸಿದ ಕೀರ್ತಿ ವ್ಯಾಸರಾಯರಿಗೆ ಸಲ್ಲುತ್ತದೆ. ಸುಮಾರು ೧೨ ವರ್ಷಗಳಷ್ಟು ಕಾಲ ತಿರುಪತಿಯ ಶ್ರೀನಿವಾಸನ ಆರಾಧನೆಯನ್ನು ಮಾಡಿದ್ದಾರೆ. ಸನ್ಯಾಸಿಯಾಗಿ, ರಾಜಗುರುವಾಗಿ, ತಿರುಪತಿಯ ಅರ್ಚಕನಾಗಿ, ಅಗಾಧವಾದ ಸಂಸ್ಕೃತ ಸಾಹಿತ್ಯದ ಜ್ಞಾನದಿಂದ ಕನ್ನಡದಲ್ಲಿ ಹಲವಾರು ಸಾಹಿತ್ಯಗಳನ್ನು ರಚಿಸಿ ಕನ್ನಡಾಂಬೆಯ ಸೇವೆ ಮಾಡಿದ ದಿವ್ಯ ಚೇತನ ಶ್ರೀ ವ್ಯಾಸರಾಯರು. ಸನ್ಯಾಸ ಜೀವನದ ಒಟ್ಟಿಗೆ ರಾಜ್ಯ ಹಾಗೂ ರಾಷ್ಟ್ರಗಳ ಸೇವೆಯನ್ನು ಮಾಡಿ ಇತಿಹಾಸದಲ್ಲಿ ಗುರುತಿಸಲ್ಪಟ್ಟ ಮಹಾ ಚೇತನ ನಮಗೆ ಆ ಚೈತನ್ಯವನ್ನು ಕೊಡಲಿ ಎಂದು ಪ್ರಾರ್ಥಿಸಿ ಈ ಆರಾಧನಾ ದಿನವನ್ನು ಸಾರ್ಥಕವಾಗಿಸೋಣ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ