
ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲಿ ಇಟಲಿ ಕೂಡ ಒಂದಾಗಿದೆ. ಇಲ್ಲಿ ಮಾನವ ಆಕಾರವನ್ನು ಹೋಲುವ ಒಂದು ವಿಲಕ್ಷಣ ಗ್ರಾಮವಿದೆ ಎಂದರೆ ನೀವು ನಂಬಲೇಬೇಕು.
ಪೂರ್ವ ಸಿಸಿಲಿಯ ಕಡಿದಾದ ಬೆಟ್ಟಗಳ ಎತ್ತರದಲ್ಲಿರುವ ಸೆಂಚುರಿಪ್ ಎಂಬ ಸಣ್ಣ ಪಟ್ಟಣವು ಮಾನವನ ಆಕೃತಿಯನ್ನು ಹೋಲುತ್ತದೆ. ಈ ಪಟ್ಟಣದ ಬಗ್ಗೆ ಕೆಲವು ಆಸಕ್ತಿಕರವಾದ ಮಾಹಿತಿ ಇಲ್ಲಿ ನೀಡಲಾಗಿದೆ
ಈ ಸುಂದರವಾದ ಸೆಂಚುರಿಪ್ ಗ್ರಾಮವು ತನ್ನ ಅಂಕುಡೊಂಕಾದ ಬೀದಿಗಳು ಮತ್ತು ದಟ್ಟವಾಗಿ ತುಂಬಿದ ಕಟ್ಟಡಗಳು ಒಂದು ಸ್ಪಷ್ಟವಾದ ಮಾನವ ಆಕಾರವನ್ನು ಹೊಂದಿದೆ. ಈ ಗ್ರಾಮವು ವಿಭಿನ್ನವಾದ ತಲೆ, ಮುಂಡ ಮತ್ತು ಕೈಕಾಲುಗಳೊಂದಿಗೆ ಸಂಪೂರ್ಣವಾಗಿದೆ. ನೋಡಲು ಮಾನವ ರೀತಿಯಲ್ಲಿ ಕಾಣುತ್ತದೆ.