

ಪೆರ್ಡೂರು ಅಲಂಗಾರು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಾಲಾವಧಿ ನೇಮೋತ್ಸವವು 14-02-2025ನೇ ಶುಕ್ರವಾರದಂದು ನಡೆಯಲಿದ್ದು, ಸಂಜೆ 6.30ರಿಂದ ನೇಮೋತ್ಸವ ಪ್ರಾರಂಭಗೊಳ್ಳಲಿದೆ. ರಾತ್ರಿ 7.30ರಿಂದ 10.30ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 1.00ಕ್ಕೆ ಶ್ರೀ ಬ್ರಹ್ಮಬೈದರ್ಕಳ ದರ್ಶನ, ದಿನಾಂಕ 15.02.2025 ರಂದು ಮುಂಜಾನೆ 4.00ಕ್ಕೆ ಜೋಗಿಪುರುಷ ನೇಮೋತ್ಸವ, 5.00ರಿಂದ ಮಾಯಂದಲಮ್ಮನ ಕೋಲ ಸೇವೆ, ಹಾಗೂ ಬೆಳಿಗ್ಗೆ 10.30ಕ್ಕೆ ಭೂತಗಳ ಕೋಲ ನಡೆಯಲಿದೆ .ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವು ಸಕುಟುಂಬ ಸಹಿತವಾಗಿ ಪಾಲ್ಗೊಂಡು ಶ್ರೀ ಬ್ರಹ್ಮಬೈದರ್ಕಳ ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಆಡಳಿತ ಮೊಕ್ತೇಸರರಾದ ಡಾ| ಕೆ. ರಮಾನಂದ ಸೂಡರವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.