ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ‘ನಮ್ಮ ಸಂವಿಧಾನ -ನಮ್ಮ ಹೆಮ್ಮೆ’ ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ:
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಮತ್ತು ವಾರ್ತಾಭಾರತಿ ಡಿಜಿಟಲ್ ಚಾನಲ್ ಇವರ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ನಡೆದ ‘ನಮ್ಮ ಸಂವಿಧಾನ – ನಮ್ಮ ಹೆಮ್ಮೆ’ ವಿಶೇಷ ಸಂವಾದ ಕಾರ್ಯಕ್ರಮ ಮತ್ತು ಚಿತ್ರೀಕರಣ ದಿನಾಂಕ :20.01.2025 ಸೋಮವಾರದಂದು ಕ್ರಿಯೇಟಿವ್ ‘ಚಿಂತಕರ ಚಾವಡಿ’ ಸಪ್ತಗಿರಿ ಕ್ಯಾಂಪಸ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂವಾದಕರಾಗಿ ನಿವೃತ್ತ ಪ್ರಾಧ್ಯಾಪಕರು ಹಾಗೂ ಖ್ಯಾತವಾಗ್ಮಿಗಳು ಶ್ರೀ ಸುರೇಂದ್ರ ಶೆಟ್ಟಿ ಕೊಕ್ಕರ್ಣೆ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. “ಸಂವಿಧಾನ ಎನ್ನುವುದು ಭಾರತ ದೇಶದ ಪ್ರತಿಯೊಬ್ಬ ನಾಗರಿಕನ ಧರ್ಮಗ್ರಂಥ. ಅದನ್ನು ಪ್ರತಿಯೊಬ್ಬರೂ ಓದಲೇಬೇಕು. ಸಂವಿಧಾನದಲ್ಲಿರುವ ಕಾಯ್ದೆ ಕಾನೂನುಗಳ ಬಗ್ಗೆ ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಆದ್ಯ ಕರ್ತವ್ಯ. ಸಂವಿಧಾನ ರಚನೆಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಂವಿಧಾನವನ್ನು ನಮಗೆ ನೀಡಿರುವುದು ಪ್ರತಿಯೊಬ್ಬ ಭಾರತೀಯ ನಾಗರಿಕನು ನೆಮ್ಮದಿಯಿಂದ ಜೀವಿಸಲಿ ಎಂದು. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳ ಬಗ್ಗೆ ಮಾತ್ರ ನಾವು ಮಾತನಾಡುತ್ತೇವೆ ಆದರೆ ಅದರಲ್ಲಿ ಅಡಕವಾಗಿರುವ ಪ್ರತಿಯೊಬ್ಬ ಭಾರತೀಯನ ಕರ್ತವ್ಯಗಳು ಏನು ಎಂಬುದನ್ನು ನಾವು ಅರಿತುಕೊಂಡಿಲ್ಲ.” ಎಂದು ವಿದ್ಯಾರ್ಥಿಗಳನ್ನು ಕುರಿತು ಸಂವಿಧಾನದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಖ್ಯಾತ ನಿರೂಪಕರು ಮತ್ತು ವಾರ್ತಾ ಭಾರತಿಯ ವರದಿಗಾರರಾದ ಶ್ರೀ ಅವಿನಾಶ್ ಕಾಮತ್ ಸಮನ್ವಯಕಾರರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಉಪನ್ಯಾಸಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.