spot_img

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ ಮಂದಿರಗಳಲ್ಲಿ ಪ್ರಾರ್ಥಿಸಿ – ಪೇಜಾವರ ಶ್ರೀ ಕರೆ

Date:

ಉತ್ತರ ಪ್ರದೇಶ ಪ್ರಯಾಗರಾಜದ ಪವಿತ್ರ ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳದ ಸಂಪೂರ್ಣ ಯಶಸ್ಸಿಗಾಗಿ ನಾಡಿನ ಸಮಸ್ತ ಸಾಧು ಸಂತರು ಹಾಗೂ ಪ್ರತೀ ಮನೆ ಮಂದಿರಗಳಲ್ಲಿ ಸಮಸ್ತ ಹಿಂದು ಸಮಾಜ ದೇವರ ಮುಂದೆ ದೀಪ ಬೆಳಗಿ ಪ್ರಾರ್ಥಿಸುವಂತೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಪೇಕ್ಷಿಸಿದ್ದಾರೆ .

ಮಹಾಕುಂಭ ಮೇಳ ಇಡೀ ಜಗತ್ತಿನ ಒಂದು ಮಹಾಕೌತುಕ . ಪ್ರಪಂಚದ ಅತೀ ದೊಡ್ಡ ಧಾರ್ಮಿಕ ಮೇಳವಾಗಿದೆ . ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವನ್ನು ಉದ್ದೇಶವಾಗಿಟ್ಟುಕೊಂಡು ದೇಶ ವಿದೇಶಗಳಿಂದ ಕೋಟ್ಯಂತರ ಸನಾತನ ಧರ್ಮೀಯರು ಅತ್ಯಂತ ಧರ್ಮಶ್ರದ್ಧೆಯಿಂದ ಭಾಗವಹಿಸುತ್ತಿದ್ದಾರೆ . ನಮ್ಮ ಆಯುರ್ಮಾನದಲ್ಲಿ ಇದು ಘಟಿಸುತ್ತಿದೆ ಎನ್ನುವುದೇ ಸಮಸ್ತ ಭಾರತೀಯರಿಗೆ ದೊಡ್ಡ ಹೆಮ್ಮೆಯಾಗಿದೆ . 40 ದಿನಗಳ ಈ ಉತ್ಸವದ ಅದ್ಭುತ ಯಶಸ್ಸಿಗಾಗಿ ಗಣ್ಯಾತಿಗಣ್ಯರಿಂದ ಮೊದಲ್ಗೊಂಡು ಕಾರ್ಮಿಕರ ವರೆಗೆ ಲಕ್ಷಾಂತರ ಜನ ಹಗಲಿರುಳೂ ಶ್ರಮಿಸುತ್ತಿದ್ದಾರೆ . ಸುಮಾರು 50 ಕೋಟಿಯಷ್ಟು ಜನ ಭಾಗವಹಿಸುತ್ತಿದ್ದಾರೆ . ಇದರ ಯಶಸ್ಸು ಒಂದು ಮಹಾ ಸವಾಲು .‌ ಮನುಷ್ಯ ಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಈ ಮಹೋತ್ಸವ ಯಾರೊಬ್ಬರಿಗೂ ಯಾವೊಂದು ರೀತಿಯ ತೊಂದರೆ , ವಿಘ್ನ , ಹಾನಿಗಳೂ ಇಲ್ಲದೇ ಅತ್ಯಂತ ಯಶಸ್ವಿಯಾಗಬೇಕು . ಆ ಯಶಸ್ಸಿನಿಂದ ಇಡೀ ದೇಶದಲ್ಲಿ ಶಾಂತಿ ಸುಭಿಕ್ಷೆ ಸುರಕ್ಷೆ ಸಮೃದ್ಧಿಗಳು ನೆಲೆಯಾಗಬೇಕು . ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ಸಮಸ್ತ ಹಿಂದುಗಳಿಗೂ ಒಂದು ಪವಿತ್ರ ಕರ್ತವ್ಯವಾಗಿದೆ .‌ಆದ್ದರಿಂದ ನಾಡಿನ ಎಲ್ಲ ಮಠಾಧೀಶರು ಸಾಧು ಸಂತರು , ದೇವಳಗಳ ಅರ್ಚಕರು ವೈದಿಕ ವಿದ್ವಾಂಸರು ಹಾಗೂ ಕೋಟ್ಯಂತರ ಹಿಂದುಗಳು ತಮ್ಮ ಮನೆ ಮಠ ಮಂದಿರಗಳಲ್ಲಿ ದೇವರ ಮುಂದೆ ದೀಪಬೆಳಗಿ ಮಹಾಕುಂಭ ಮೇಳದ ಯಶಸ್ಸಿಗಾಗಿ ಪ್ರಾರ್ಥಿಸೋಣ .
ಎಲ್ಲರಿಗೂ ಒಳಿತಾಗಲಿ .

ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
ಶ್ರೀ ಪೇಜಾವರ ಅಧೋಕ್ಷಜ ಮಠ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಲೋಡ್ ಶೆಡ್ಡಿಂಗ್ ಇಲ್ಲದ ಬೇಸಿಗೆ ! ಜನತೆಗೆ ಸರಕಾರದಿಂದ ಸಿಹಿಸುದ್ದಿ

ಬೇಸಿಗೆ ಕಾಲ ಆರಂಭವಾಗುವ ಮುನ್ನವೇ ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆ.ಜೆ.ಜಾರ್ಜ್. ಈ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಜಾರ್ಜ್ ಖಚಿತಪಡಿಸಿದ್ದಾರೆ.

ಜನ್ಮಸಿದ್ಧ ಪೌರತ್ವ ಹಕ್ಕು ರದ್ದು! ಅಮೆರಿಕದಲ್ಲಿನ 18 ಲಕ್ಷ ಭಾರತೀಯರಿಗೆ ಆತಂಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 2 ನೇ ಪಾರುಪತ್ಯದ ಅವಧಿಯ ಮೊದಲ ದಿನವೇ ವಲಸೆ ಮತ್ತು ಪೌರತ್ವಕ್ಕೆ ಸಂಬಂಧಿಸಿದ ಹಲವು ಮಹತ್ವದ ಆದೇಶಗಳಿಗೆ ಸಹಿ ಹಾಕಿದ್ದಾರೆ.

ದಾಖಲೆಯತ್ತ ದಾಪುಗಾಲಿಡುತ್ತಿರುವ ಚಿನ್ನದ ಬೆಲೆ

ಚಿನ್ನದ ಬೆಲೆ ಇತಿಹಾಸ ಸೃಷ್ಟಿಸಿದ್ದು, 8 ಗ್ರಾಂ ಚಿನ್ನದ ದರವು 60,200 ರೂ.ಗೆ ಏರಿಕೆಯಾಗಿದೆ.

ದ್ವಿತೀಯ ಪಿಯು ಹಾಜರಾತಿ: ಶೇ.75ಕ್ಕಿಂತ ಕಡಿಮೆ ಇದ್ದರೆ ಪ್ರವೇಶ ಪತ್ರವಿಲ್ಲ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ದ್ವಿತೀಯ ಪಿಯು ಕಾಲೇಜುಗಳಿಗೆ ಹೊಸ ಸೂಚನೆ ನೀಡಿದೆ. ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳ ಬಗ್ಗೆ ಕೂಡಲೇ ಮಂಡಳಿಗೆ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ.