
ಪೇಪರ್‌ಲೆಸ್ ಯುಗ ಅಂದರೇ ಇದೆ ಇರಬೇಕು. ಪೆನ್ನು ಪೇಪರ್‌ಗಳ ಬಳಕೆಯೇ ಗೌಣವಾಗಿದೆ. ಕಂಪ್ಯೂಟರ್‌ವೊಬೈಲ್ ಗಳು ಶೇ. 99 ರಷ್ಟು ಮಾನವನ ಕೈಯಾರೆ ಬರೆಯುವ ಬರವಣಿಗೆಯನ್ನು ನಿಲ್ಲಿಸಿದೆ. ಹಿಂದೆ ಬಾಲ್ಯದಿಂದಲೇ ಬಳಪ, ಸ್ಲೇಟ್ ಅಕ್ಷರಾಭ್ಯಾಸಕ್ಕೆ ಬಳಸುತ್ತಿದ್ದರು. ಬಳಪಗಳ್ಳೋ ವಿಧ ವಿಧವಾದವುಗಳಿದ್ದವು. ಸ್ಲೇಟ್ ಗಳಲ್ಲೂ ಎಷ್ಟೊಂದು ಬಗೆ ಕಲ್ಲಿನ ಸ್ಲೇಟ್, ತಗಡಿನ ಸ್ಲೇಟ್, ತೀರಾ ಇತ್ತೀಚೆಗೆ ಪ್ಲಾಸ್ಟಿಕ್ ಸ್ಲೇಟ್ ಬಳಕೆ ಪ್ರಾರಂಭವಾಯಿತು.
ಸ್ವಲ್ಪ ದೊಡ್ಡವರಾದಂತೆ ಸೀಸದ ಕಡ್ಡಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದೆವು ಮತ್ತು ಕಲಿಯುತ್ತಿದ್ದೇವು. ಮುಂದೆ ಮುಂದೆ ದೊಡ್ಡ ದೊಡ್ಡ ತರಗತಿಗಳಿಗೆ ಹೋದಂತೆ ಎಕ್ಸಸೈಜ್, ಪೇಪರ್ ಮತ್ತು ಪೆನ್ನುಗಳ ಬಳಕೆ ಮಾಡುವುದು ಮಾಮೂಲುಯಿತು.