
ಪಂಚನಬೆಟ್ಟು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಯ 2024-2025 ಸಾಲಿನ ಶಾಲಾ ವಾರ್ಷಿಕೋತ್ಸವವು ಪ್ರಾಥಮಿಕ ಶಾಲೆ ಮತ್ತು ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳ ಜಂಟಿ ಆಶ್ರಯದಲ್ಲಿ ದಿನಾಂಕ 11-01-2025 ಶನಿವಾರದಂದು ಶಾಲಾ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ವಾಸುದೇವ ಭಟ್ ನೆಕ್ಕರೆ ಪಲ್ಕೆ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಶಾಲಾ ಟ್ರಸ್ಟ್ ನ ಅಧ್ಯಕ್ಷರಾದ ಸುರೇಂದ್ರ ಆರ್ ನಾಯಕ್ ಮುಂಬಯಿ ರವರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕುಯಿಲಾಡಿ ಸುರೇಶ್ ನಾಯಕ್, ಟ್ರಸ್ಟಿ ವಿಶ್ವನಾಥ್ ಆರ್ ನಾಯಕ್ ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್, ಮುಂಬಯಿ (ರಿ), ಬಾಲಕೃಷ್ಣ ಪ್ರಭು ಮಾಹೆ, ವಾಸುದೇವ ಪ್ರಭು ಮಾಹೆ, ಶಾಲಾ ಟ್ರಸ್ಟಿ ಯವರಾದ ಸಂತೋಷ್ ಕಾಮತ್, ಮಂಜುಳಾ ವಿ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಶಾಲಾ ಟ್ರಸ್ಟಿ ಸತೀಶ್ ಬಿ ಶೆಟ್ಟಿಗಾರ್, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯಕ್ ಕುಳೆದು, ಶಾಲಾ ಮುಖ್ಯೋಪಾಧ್ಯಾಯರಾದ ಪಾಂಡುರಂಗ ನಾಯ್ಕ್ , ಆಡಳಿತ ಮಂಡಳಿ ಸದಸ್ಯರಾದ ನಿತ್ಯಾನಂದ ಪ್ರಭು, ಶ್ಯಾಮಲಾ ನಾಯ್ಕ್ ಮತ್ತು ಅಶ್ವಿನಿ ನಾಯ್ಕ್, ಶಾಲಾ ವಿದ್ಯಾರ್ಥಿ ನಾಯಕ ಸಂಚಯ್ ನಾಯ್ಕ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಪಾಂಡುರಂಗ ನಾಯ್ಕ್ ಇವರಿಗೆ ಸನ್ಮಾನಿಸಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಹಳೆ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಭಿನಯ ಕಲಾವಿದರು ಉಡುಪಿ ಇವರಿಂದ ಬರಂದೇ ಕುಲ್ಲಯೇ ನಾಟಕವು ಯಶಸ್ವಿಯಾಗಿ ನಡೆಯಿತು.
ಶಾಲಾ ಹಳೆವಿದ್ಯಾರ್ಥಿ ಯವರಾದ ಸಂದೇಶ್ ಕುಲಾಲ್ ಮತ್ತು ರಾಜೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ಟ್ರಸ್ಟಿ ಸಂತೋಷ್ ಕಾಮತ್ ವಂದಿಸಿದರು.
ಸಹ ಶಿಕ್ಷಕ/ಶಿಕ್ಷಕಿಯರು, ಪೋಷಕರು, ಹಳೇವಿದ್ಯಾರ್ಥಿಗಳು, ಶಾಲಾ ವಿದ್ಯಾಭಿಮಾನಿಗಳು ಊರವರ ಸಹಕಾರದಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ ಎಂದು ಪ್ರಕಟಣೆಯೆಲ್ಲಿ ತಿಳಿಸಲಾಗಿದೆ.