
ಪಂಚನಬೆಟ್ಟು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಪ್ರಾಥಮಿಕ ಶಾಲೆ ಮತ್ತು ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್ ಮುಂಬೈ (ರಿ.)
ಹಾಗೂ ಹಳೆ ವಿದ್ಯಾರ್ಥಿಗಳ ಜಂಟಿ ಆಶ್ರಯದಲ್ಲಿ ದಿನಾಂಕ 11-01-2025 ನೇ ಶನಿವಾರ ಬೆಳಿಗ್ಗೆ 9.15 ಕ್ಕೆ ಧ್ವಜಾರೋಹಣದಿಂದ ಮೊದಲ್ಗೊಂಡು ಸಿಹಿತಿಂಡಿ ವಿತರಣೆ
ತದನಂತರ ಶಾಲಾ ಮಕ್ಕಳಿಂದ, ಪೋಷಕರಿಂದ ಮತ್ತು ಹಳೇವಿದ್ಯಾರ್ಥಿಗಳಿಂದ ಛದ್ಮವೇಷ ಸ್ಪರ್ಧೆ ಜರಗುವುದು. ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮವು ಪಂಚನಬೆಟ್ಟು ಅಂಗನವಾಡಿ ಮಕ್ಕಳಿಂದ ಹಾಗೂ ಶಾಲಾ ಮಕ್ಕಳಿಂದ ನೃತ್ಯಾವಳಿಗಳು ನಡೆಯುವವು.
ತದನಂತರ ಸಭಾಕಾರ್ಯಕ್ರಮವು ಮುಗಿದ ಕೂಡಲೇ ಪೋಷಕರಿಂದ ಹಾಗೂ ಹಳೇವಿದ್ಯಾರ್ಥಿಗಳಿಂದ ನೃತ್ಯಾವಳಿಗಳು ನಂತರ “ಬರಂದೆ ಕುಲ್ಲಯೇ” ಎಂಬ ಸಾಮಾಜಿಕ ತುಳುನಾಟಕ ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್ ಮುಂಬೈ (ರಿ) ಇವರ ಪ್ರಾಯೋಜಕತ್ವದಲ್ಲಿ ನೆರವೇರಲಿದೆ.
ಸರ್ವರಿಗೂ ಆದರದ ಸ್ವಾಗತ ಮುಖ್ಯೋಪಾಧ್ಯಾಯರು, PAHPS ಶಾಲಾ ಟ್ರಸ್ಟ್, ಶಾಲಾ ಆಡಳಿತ ಮಂಡಳಿ, ಶಿಕ್ಷಕ
ಶಿಕ್ಷಕಿಯರು, ಪೋಷಕರು, ಹಳೇವಿದ್ಯಾರ್ಥಿಗಳು. ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಪಂಚನಬೆಟ್ಟು.