ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕೋಟ್ಯಾಂತರ ಭಕ್ತರು ಸಾಕ್ಷಿಯಾದರು. ಶಾಹಿ ಸ್ನಾನದ ಮೊದಲ ದಿನವೇ ಮೂರುವರೆ ಕೋಟಿ ಭಕ್ತರು ಪವಿತ್ರ ಸ್ನಾನ ಕೈಗೊಳ್ಳುವ ಮೂಲಕ ಪುಣ್ಯಸಾಧನೆ ಮಾಡಿದರು.
ಉಡುಪಿಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಮಹಾಕುಂಭ ಮೇಳದ ಮೊದಲ ದಿನವೇ ಪುಣ್ಯಸ್ನಾನ ಕೈಗೊಳ್ಳುವ ಮೂಲಕ ತಮ್ಮ ಶ್ರದ್ಧೆ ಮತ್ತು ಭಕ್ತಿಯನ್ನು ವ್ಯಕ್ತಪಡಿಸಿದರು.
ಉಡುಪಿಯಿಂದ ಅನೇಕ ಭಕ್ತರು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಇದೇ ತಿಂಗಳ 24ರಂದು ಕುಂಭಮೇಳದಲ್ಲಿ ಭಾಗವಹಿಸಲಿದ್ದಾರೆ.
ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯ ಸ್ನಾನ ಉತ್ಸಾಹ ಭಕ್ತರಲ್ಲಿ ವಿಶೇಷ ಉಲ್ಲಾಸ ತಂದಿದ್ದು, ಮಹಾಕುಂಭ ಮೇಳದ ಆಧ್ಯಾತ್ಮಿಕ ಶೋಭೆಯನ್ನು ಮತ್ತಷ್ಟು ಹೆಚ್ಚಿಸಿದೆ.