
ಗೋ ಸೇವಾ ಗತಿವಿಧಿ, ಕರ್ನಾಟಕ ರಾಧಾ ಸುರಭಿ ಗೋಮಂದಿರ ಮತ್ತು ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ.) ಸಹಯೋಗದಲ್ಲಿ ನಂದಿ ರಥಯಾತ್ರೆ ಹಾಗೂ ಸಭಾ ಕಾರ್ಯಕ್ರಮ ಜನವರಿ 10ರಂದು ಸಂಜೆ 5 ಗಂಟೆಗೆ ಕಾರ್ಕಳದ ಮಂಜುನಾಥ ಪೈ ಸಭಾಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು “ವಿಷಮುಕ್ತ ಗಾಳಿ, ಮಣ್ಣು, ಆಹಾರ ಮತ್ತು ಪ್ರಕೃತಿ” ಎಂಬ ಘೋಷವಾಕ್ಯದಡಿಯಲ್ಲಿ ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ದೇಶೀ ಗೋಮಾತೆಯ ಮಹತ್ವ ಹಾಗೂ ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸಲು ಪ್ರಚಾರದ ಭಾಗವಾಗಿ ಆಯೋಜಿಸಲಾಗಿದೆ.
ಮುಖ್ಯ ಉದ್ದೇಶಗಳು
- ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು.
- ನಂದಿ ಪೂಜೆ ಮತ್ತು ಗೋ ಕಥೆ ಮೂಲಕ ದಾರ್ಶನಿಕ ಚಿಂತನೆಗಳನ್ನು ಪ್ರಚಾರ ಮಾಡುವುದು.
- ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಾರಾಯಣ.
- ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದು.
- ಸಾಮೂಹಿಕ ಕೃಷಿ ವಿಸ್ತರಣೆ, ದೇಶೀ ಬೀಜ ಸಂರಕ್ಷಣೆ, ಮತ್ತು ಗ್ರಾಮ ವಿಕಾಸ.
ಕಾರ್ಯಕ್ರಮದ ವಿವರ
ಸಂಜೆ 5 ಗಂಟೆಗೆ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ನಂದಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ರಥಯಾತ್ರೆ ಅನಂತಶಯನ ವೃತ್ತದಿಂದ ಪ್ರಾರಂಭಗೊಂಡು ಮಂಜುನಾಥ ಪೈ ಸಭಾಭವನದವರೆಗೆ ಸಾಗಲಿದೆ.
ಸಂಜೆ 6.15ಕ್ಕೆ ವಿಷ್ಣು ಸಹಸ್ರನಾಮ ಪಠಣದೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಆಹ್ವಾನಿತ ವ್ಯಕ್ತಿಗಳು
ಗೋ ಸೇವಾ ಗತಿವಿಧಿ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್, ಮುಂಬೈನ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಉದ್ಯಮಿಗಳಾದ ಬೋಳ ಶ್ರೀನಿವಾಸ್ ಕಾಮತ್, ವಿಜಯ ಶೆಟ್ಟಿ ಮತ್ತು ನ್ಯಾಯವಾದಿ ಎಂ.ಕೆ. ವಿಪುಲ್ ತೇಜ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.