
ಮಲ್ಪೆ: ಪರಶುರಾಮ ಫ್ರೆಂಡ್ಸ್ ಮಲ್ಪೆ ಅವರ ಆಶ್ರಯದಲ್ಲಿ ಜನವರಿ 11ರಿಂದ 14ರವರೆಗೆ ಮಲ್ಪೆ ಕಡಲ ತೀರದಲ್ಲಿ ಭರ್ಜರಿ “ಮಲ್ಪೆ ಫುಡ್ ಫೆಸ್ಟ್” ಅನ್ನು ಆಯೋಜಿಸಲಾಗಿದೆ.
ಈ ನಾಲ್ಕು ದಿನಗಳ ವಿಶೇಷ ಆಹಾರ ಹಬ್ಬದಲ್ಲಿ ಬಗೆ ಬಗೆ ಖಾದ್ಯಗಳನ್ನು ರುಚಿಸಿ, ಖಾದ್ಯಪ್ರಿಯರು ಖುಷಿಪಡಬಹುದು. ಇದರೊಂದಿಗೆ, ಮಲ್ಪೆ ಕಡಲ ತೀರಕ್ಕೆ ಇದು ಒಂದು ಹೊಸ ಉತ್ಸಾಹವನ್ನು ತರುತ್ತದೆ.
ಫೆಸ್ಟ್‌ನ ಮತ್ತೊಂದು ಪ್ರಮುಖ ಆಕರ್ಷಣೆ ರಾತ್ರಿ ಲ್ಯಾಟಿನ್ ಫೆಸ್ಟಿವಲ್. ಇದೇ ಮೊದಲ ಬಾರಿಗೆ ಮಲ್ಪೆಯಲ್ಲಿ ನಡೆಯಲಿರುವ ಈ ವಿಶೇಷ ಹಬ್ಬದಲ್ಲಿ, ಸಾವಿರಕ್ಕೂ ಹೆಚ್ಚು ಲ್ಯಾಟಿನ್ಗಳು ಗಾಳಿಗೆ ಹಾರಿಬಿಡಲಾಗುತ್ತವೆ. ಈ ದೃಶ್ಯ ಪ್ರವಾಸಿಗರಿಗೆ ನಿಜಕ್ಕೂ ಅದ್ಭುತ ಅನುಭವವನ್ನು ನೀಡಲಿದೆ.
ಮನರಂಜನೆಯ ಭಾಗವಾಗಿ, ಪ್ರತಿದಿನ ಲೈವ್ ಮ್ಯೂಸಿಕ್, ಡ್ಯಾನ್ಸ್ ಪ್ರದರ್ಶನಗಳು, ಮತ್ತು ಸುಡುಮದ್ದು ಶೋಗಳು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ, ಚೀನಾದ ಬೃಹತ್ ಲಯನ್ ಪ್ರದರ್ಶನ ಈ ಹಬ್ಬದ ಪ್ರಮುಖ ಹೈಲೈಟ್ ಆಗಿರಲಿದೆ.
ಹೆಚ್ಚಿನ ಮಾಹಿತಿಗಾಗಿ 8970305000 ಅಥವಾ 9036638898 ನಂಬರಿಗೆ ಸಂಪರ್ಕಿಸಿ ಎಂದು ಆಯೋಜಕರು ತಿಳಿಸಿದ್ದಾರೆ.