spot_img

ಬಾಲಸಂಸ್ಕಾರದಲ್ಲಿ ಕೋಟಿ-ಚೆನ್ನಯ್ಯರ ನೀತಿ ಪಾಠ

Date:

“ಜ್ಞಾನಭಾರತ್-ಬಾಲಸಂಸ್ಕಾರ
ಕೋಟಿ-ಚೆನ್ನಯ್ಯರ ನಡೆ-ನುಡಿ
ಎಂದೆಂದಿಗೂ ಶಾಶ್ವತ” – ಸಂಗೀತಾ ಕುಲಾಲ್


ಗಣಿತನಗರ : ತುಳುನಾಡಿನ ಅವಳಿವೀರರಾದ ಕೋಟಿ ಚೆನ್ನಯ್ಯರು ಅಧರ್ಮದ ವಿರುದ್ಧ, ನ್ಯಾಯದ ಪರವಾಗಿ ಹೋರಾಡಿದ ವೀರಪುರುಷರು. ಹಿರಿಯರಿಗೆ ಗೌರವವನ್ನು, ಶಿಷ್ಟರ ರಕ್ಷಣೆಯನ್ನು ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡ ಕೋಟಿ-ಚೆನ್ನಯ್ಯರ ಮೌಲ್ಯಯುತ ಜೀವನ ಇಂದಿಗೂ ಎಂದೆಂದಿಗೂ ಮೌಲ್ಯಯುತ ಎಂದು ಜ್ಞಾನಭಾರತ್-ಬಾಲಸಂಸ್ಕಾರದ ಕಾರ್ಯದರ್ಶಿ ಶ್ರೀಮತಿ ಸಂಗೀತಾ ಕುಲಾಲ್ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯುವ ಜ್ಞಾನಭಾರತ್ – ಬಾಲ ಸಂಸ್ಕಾರ ಸಾಪ್ತಾಹಿಕ ಸರಣಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭ ವೃಂದದ ಸದಸ್ಯರಾದ ಶ್ರೀಮತಿ ಉಷಾ ರಾವ್ ಯು, ಶ್ರೀಮತಿ ಗಾಯತ್ರಿ ನಾಗೇಶ್, ಶ್ರೀಮತಿ ಚೇತನಾ ಸಂದೀಪ್, ಶ್ರೀಮತಿ ಅಕ್ಷತಾ ಹಾಗೂ ಶ್ರೀಮತಿ ಲಕ್ಷಿ
ಉಪಸ್ಥಿತರಿದ್ದರು. ಬಾಲಸಂಸ್ಕಾರದ ಬಾಲಕ ಬ್ರಜೇಶ್ ಕಾರ್ಯಕ್ರಮ ನಿರೂಪಿಸಿ, ಆಯುಶ್ಯು ಶೆಟ್ಟಿ ವಂದಿಸಿದರು. ಆರಾಧ್ಯ ಶ್ರೀ ರಾಮರಕ್ಷಾಸ್ತೋತ್ರವನ್ನು ಹಾಗೂ ಪ್ರೇರಣಾ ಬೋರ್ಕರ್ ಭಗವದ್ಗೀತೆಯ ಮೊದಲ ಹತ್ತು ಶ್ಲೋಕವನ್ನು ವಾಚಿಸಿದರು. ಬಾಲ-ಸಂಸ್ಕಾರಕ್ಕೆ ಸೇರಲಿಚ್ಚಿಸುವ ಕಾರ್ಕಳ ತಾಲೂಕಿನ ಮಕ್ಕಳ ಪೋಷಕರು ಸಂಸ್ಥೆಯನ್ನು ಸಂಪರ್ಕಿಸಿ ಮಕ್ಕಳ ಹೆಸರನ್ನು ಈ ತಿಂಗಳ 28ನೇ ತಾರಿಕಿನೊಳಗಾಗಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ
9902192469 ಇವರನ್ನು ಸಂಪರ್ಕಿಸಲುಬಹುದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಮಹಾರಾಜ ಕರ್ಣಿ ಸಿಂಗ್

ಬಿಕನೆರ್ ನ ರಾಜ ವಂಶಸ್ಥ ಮಹಾರಾಜ ಸಾಧುಲ್ ಸಿಂಗ್ ದಂಪತಿಗಳಿಗೆ 1924 ಎಪ್ರಿಲ್ 21ರಂದು ಕರ್ನಿ ಸಿಂಗ್ ಜನಿಸಿದರು.

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ