
ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ, ಪಿಲಿಚಂಡಿಗುಡ್ಡೆ, ಕೆರ್ವಾಶೆ
ಇದರ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ, ಶ್ರೀ ಕ್ಷೇತ್ರದಲ್ಲಿ ನೂತನವಾಗಿ ಆರಂಭವಾದ ಸುಮಾರು 31 ಭಜಕರಿರುವ, “”ಶ್ರೀ ವ್ಯಾಘ್ರ ಚಾಮುಂಡಿ ಭಜನಾ ಮಂಡಳಿ “” ಇದರ ಉದ್ಘಾಟನೆಯು ಕ್ಷೇತ್ರದ ಪ್ರಧಾನ ಅರ್ಚಕರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕುಣಿತ ಭಜನಾ ತರಭೇತಿ ನೀಡಿದ ಗುರುಗಳಾದ ಶ್ರೀ ಶ್ರೀನಿವಾಸ್ ಪೂಜಾರಿ ಎರ್ಲಪಾಡಿಯವರನ್ನು ಮತ್ತು ಸಹ ತರಭೇತುದಾರೆಯಾದ ಸುಶ್ಮಿತಾ ಪೂಜಾರಿ ಸಚ್ಚೇರಿಪೇಟೆ ಇವರನ್ನು ಗುರು ಕಾಣಿಕೆ ನೀಡಿ ಗೌರವಿಸಲಾಯಿತು
ಈ ಸಂದರ್ಭ ವೇದಿಕೆಯಲ್ಲಿ ಕ್ಷೇತ್ರದ ಗೌರವಧ್ಯಕ್ಷರು, ಹಿರಿಯರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಭಜನಾ ಮಂಡಳಿಯ ಸದಸ್ಯರು, ಪೋಷಕರು, ಹಾಗೂ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು