
ಅಮೇರಿಕ ಮತ್ತು ಭಾರತವು ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲೀನ ಸಂಬಂಧವನ್ನು ಹಂಚಿಕೊಂಡಿವೆ. ಬಾಲ್ಯ ಶಿಕ್ಷಣದಿಂದ ಹಿಡಿದು ಪದವಿಪೂರ್ವ ಮತ್ತು ಪದವಿ ಹಂತಗಳಲ್ಲಿ ವಿದ್ಯಾರ್ಥಿಗಳ ದ್ವಿಮುಖ ಸಂಚಾರ ಉತ್ತೇಜಿಸುವವರೆಗೆ ವ್ಯಾಪಕ ಶ್ರೇಣಿಯ ಉಪಕ್ರಮಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಿವೆ.
ಈ ನಿರಂತರ ಸಹಕಾರವು ಈಗ ವಿಮೆನ್ ಇನ್ ಸ್ಟೆಮ್ ಫೆಲೋಶಿಪ್ (Women in STEMM) (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮೆಥಮ್ಯಾಟಿಕ್ಸ್ ಮತ್ತು ಮೆಡಿಸಿನ್) ಯೋಜನೆಯ ಆರಂಭದೊಂದಿಗೆ ಇನ್ನಷ್ಟು ವಿಸ್ತರಿಸುತ್ತಿದೆ. ಇದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಗುಪ್ತಾ-ಕ್ಲಿನ್ಸ್ಕಿ ಇಂಡಿಯಾ ಸಂಸ್ಥೆ ಮತ್ತು ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಅಮೇರಿಕ-ಭಾರತ ಒಕ್ಕೂಟ (U.S.-India Alliance for Women’s Economic Empowerment) ನಡುವಿನ ಸಹಭಾಗಿತ್ವವಾಗಿದೆ. ಇದು ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿರುವ ಭಾರತದ ಮಹಿಳಾ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಅವರ STEMM ಕ್ಷೇತ್ರಗಳಲ್ಲಿ ನೇತಾರನನ್ನಾಗಿಸಲು ಸಬಲಗೊಳಿಸುವುದು ಮತ್ತು ಅಗತ್ಯ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದೆ.