
ಭೂಮಿಯನ್ನು ಅಗೆಯುವ ಅಧಿಕಾರ ಯಾರಿಗೂ ಇಲ್ಲ. ಆದರೂ ಕೂಡ ಸಮಾಜಕ್ಕಾಗಿ ಭೂಮಿಯನ್ನು ಅಗೆಯುವ ಪ್ರಕ್ರಿಯೆಗಳು ಹಿಂದಿನಿಂದಲೂ ನಮ್ಮಲ್ಲಿದೆ. ಅರ್ಥಾತ್ ದೇವಾಲಯಗಳನ್ನು ಅರಮನೆಗಳನ್ನು ನಿರ್ಮಿಸುವಾಗ ಭದ್ರವಾದ ಕೋಟೆಗಳನ್ನು ಕಟ್ಟುವಾಗ ಅಥವಾ ಅಲ್ಪಸ್ವಲ್ಪ ಖನಿಜವನ್ನು ತೆಗೆಯುವುದು ಕೂಡ ಇತ್ತು. ಆದರೆ ಇದಲ್ಲ ರಾಜ ಆಶ್ರಯದಲ್ಲಿ ನಡೆಯುತ್ತಿದ್ದವು.

ಆದರೆ ಹಣ ಮಾಡುವ ಗೀಳು ಮನುಷ್ಯನಿಗೆ ತೊಡಗಿದಾಗಿನಿಂದ ಮನುಷ್ಯ ಭೂಮಿಯನ್ನು ಅಡಿಗಟ್ಟಲೆ ಅಗೆದು ಖನಿಜಗಳನ್ನು ತೆಗೆದು ಮಾರುವುದಕ್ಕೆ ತೊಡಗಿದ. ಈ ಆಸೆಗೆ ಲಕ್ಷಗಟ್ಟಲೆ ವರ್ಷಗಳಿಂದ ಈ ನೆಲಕ್ಕೆ ಆಧಾರವಾಗಿದ್ದ ಪರ್ವತಗಳು ಕೂಡ ಬಲಿಯಾದವು. ಇದನ್ನು ಕಂಡು ಈ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ದಿನವನ್ನು ಮೀಸಲಿಟ್ಟರು. ಭೂಮಿ, ಹೆತ್ತ ತಾಯಿಗೆ ಸಮಾನ ತನ್ನ ಸ್ವಾರ್ಥಕ್ಕಾಗಿ ಅವಳನ್ನು ಅಗೆದು ಬದುಕುವ ನೀಚಸ್ಥಿತಿ ನಮಗೆ ಬಾರದಿರಲಿ
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ