
ಹೈದರಾಬಾದ್: ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ ಮತ್ತು ಯುವ ನಟ ವಿಜಯ್ ದೇವರಕೊಂಡ ಅವರ ಸಂಬಂಧದ ಬಗ್ಗೆ ಮತ್ತೆ ಗಾಸಿಪ್‌ಗಳು ಹರಿದಾಡುತ್ತಿವೆ. ಈ ಬಾರಿ ಅವರ ನಿಶ್ಚಿತಾರ್ಥದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದ್ದು, ಇದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ. ಇದಕ್ಕೆ ಕಾರಣ, ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಶ್ಮಿಕಾ ಧರಿಸಿದ್ದ ವಜ್ರದ ಉಂಗುರ.
ಈ ಕಾರ್ಯಕ್ರಮದ ನಂತರ ರಶ್ಮಿಕಾ ಅವರ ಬೆರಳಿಗೆ ಹೊಳೆಯುತ್ತಿದ್ದ ಉಂಗುರವನ್ನು ಗಮನಿಸಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕವಾಗಿ ಚರ್ಚೆ ನಡೆಸುತ್ತಿದ್ದಾರೆ. ಅನೇಕರು “ರಶ್ಮಿಕಾ ಮಂದಣ್ಣ ಈಗ ರಶ್ಮಿಕಾ ದೇವರಕೊಂಡ ಆಗಿದ್ದಾರೆಯೇ?” ಎಂದು ಪ್ರಶ್ನಿಸಿದ್ದು, ಕೆಲವು ಹಾಸ್ಯಪ್ರಜ್ಞೆ ಉಳ್ಳ ಅಭಿಮಾನಿಗಳು “ವಿಜಯ್ ದೇವರಕೊಂಡ ಅವರ ಕೈಗಳನ್ನು ಕೂಡ ಪರಿಶೀಲಿಸಬೇಕಾಗಿದೆ” ಎಂದು ಕಾಲೆಳೆದಿದ್ದಾರೆ.
ಈ ಇಬ್ಬರು ನಟರು ಈಗಾಗಲೇ ಅನೇಕ ಸಂದರ್ಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಅವರ ನಟನೆಯ ಚಿತ್ರಗಳು ಕೂಡ ಯಶಸ್ವಿಯಾಗಿವೆ. ಆದರೆ, ತಮ್ಮ ಸಂಬಂಧದ ಕುರಿತು ಅವರು ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ನಿಶ್ಚಿತಾರ್ಥದ ವದಂತಿಗಳ ಬಗ್ಗೆಯೂ ಅವರು ಇನ್ನೂ ಪ್ರತಿಕ್ರಿಯಿಸಿಲ್ಲ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ, ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಮೌನ ಮುಂದುವರೆಸಿರುವುದರಿಂದ ಸತ್ಯ ಹೊರಬೀಳುವುದು ಕಷ್ಟ.