
ನಟ ಧನಂಜಯ್ ನಟಿಸಿರುವ ಬಹುಭಾಷಾ ಚಿತ್ರ “ಜೀಬ್ರಾ’ ನ.22ರಂದು ತೆರೆ ಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ರಿಲೀಸ್ ಇವೆಂಟ್‌ಗೆ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭಕೋರಿದ್ದಾರೆ.
ಧನಂಜಯ್ ಜೊತೆಗೆ ತೆಲುಗು ನಟ ಸತ್ಯದೇವ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. “ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ ಅಂತಾ ಸಿಪಾಯಿ ಸಿನಿಮಾ ಹಾಡು ಹೇಳಿ ಚಿರಂಜೀವಿಗೆ ನಮಸ್ಕಾರ ಮಾಡಿದ ಡಾಲಿ ಧನಂಜಯ್, ಜೀಬ್ರಾ ಕನ್ನಡಕ್ಕೆ ತುಂಬಾ ಚೆನ್ನಾಗಿ ಡಬ್ ಮಾಡಲಾಗಿದೆ. ನಮ್ಮ ಡೇರ್ ಡೆವಿಲ್ ಮುಸ್ತಫಾ ಸಿನಿಮಾ ತಂಡ ಡಬ್ ಮಾಡಿದೆ. ನವೆಂಬರ್ 22ಕ್ಕೆ ಚಿತ್ರ ತೆರೆಗೆ ಬರುತ್ತಿದೆ’ ಎಂದರು ನಟ ಧನಂಜಯ್.